ರಾಷ್ಟ್ರೀಯ

ಎಲ್ ಪಿಜಿ ಗ್ರಾಹಕರಿಗೆ ಸಿಹಿಸುದ್ದಿ : 24*7 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ತುರ್ತು ಸಂಖ್ಯೆ 1906 ಆರಂಭ

Pinterest LinkedIn Tumblr

ನವದೆಹಲಿ : ದೇಶದ ಅತಿದೊಡ್ಡ ಪೆಟ್ರೋಲಿಯಂ ಕಂಪನಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಎಲ್ ಪಿಜಿ ಗ್ರಾಹಕರಿಗೆ ಸಿಹಿಸುದ್ದಿವೊಂದು ನೀಡಿದ್ದು, ಇನ್ಮುಂದೆ ಸಿಲಿಂಡರ್ ಪೂರೈಸುವ ವಿತರಕರು ಕಡ್ಡಾಯವಾಗಿ ತೂಕ, ಸೂರಿಕೆ ಮತ್ತು ವಾಲ್ಟ್ ಸೋರಿಕೆ ಸೇರಿದಂತೆ ಸುರಕ್ಷಿತ ಅಂಶಗಳನ್ನು ಪರಿಶೀಲಿಸಬೇಕು ಎಂದು ಖಡಕ್ ಸೂಚನೆ ನೀಡಿದೆ.

ಗ್ರಾಹಕರಿಂದ ಕೆಲವೊಂದು ದೂರು ಬಂದಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಗ್ರಾಹಕರ ದೂರಿಗೆ ಸ್ಪಂದಿಸಲು 24*7 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ತುರ್ತು ಸಂಖ್ಯೆ 1906 ಆರಂಭಿಸಿದೆ.

ದೇಶದಾದ್ಯಂತ 12 ಸಾವಿರ ವಿತರಕರು, 64 ಸಾವಿರ ಪೂರೈಕೆದಾರರು ಹಾಗೂ 12.5 ಕೋಟಿ ಗ್ರಾಹಕರನ್ನು ಹೊಂದಿರುವ ಇಂಡಿಯನ್ ಆಯಿಲ್ ಕಾರ್ಪೋರೇಷನ, ಪ್ರತಿದಿನ 30 ಲಕ್ಷ ಸಿಲಿಂಡರ್ ಗಳನ್ನು ಪೂರೈಕೆ ಮಾಡುತ್ತಿದೆ

Comments are closed.