ಭೋಪಾಲ್ : ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಪತಿಯೊಬ್ಬ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ಪತ್ನಿ, ಪ್ರೇಮಿ ಜೊತೆ ಹೊಸ ಜೀವನ ಶುರು ಮಾಡಲಿ ಎನ್ನುವ ಕಾರಣಕ್ಕೆ ಪತಿ ಈ ಕೆಲಸಕ್ಕೆ ಕೈ ಹಾಕಿದ್ದಾನೆ. ಆತನ ಕಾರ್ಯಕ್ಕೆ ಭೋಪಾಲ್ ಜನರು ಭೇಷ್ ಎನ್ನುತ್ತಿದ್ದಾರೆ.
ಸಾಫ್ಟ್ ವೇರ್ ಇಂಜಿನಿಯರ್ ಪತ್ನಿ ಫ್ಯಾಷನ್ ಡಿಸೈನರ್. ಇಬ್ಬರೂ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರಂತೆ. ದಂಪತಿಗೆ ಇಬ್ಬರು ಮಕ್ಕಳಿವೆ. ಆದ್ರೆ ಪತ್ನಿ, ಹಳೆ ಪ್ರೇಮಿಯನ್ನು ಮರೆಯುತ್ತಿಲ್ಲವಂತೆ. ಈಗ್ಲೂ ಆತನ ಜೊತೆ ಸಂಬಂಧ ಹೊಂದಿದ್ದಾಳಂತೆ. ಮದುವೆಗೂ ಮುನ್ನ ಆತನನ್ನು ಪ್ರೀತಿಸುತ್ತಿದ್ದೆ. ಆದ್ರೆ ಬೇರೆ ಜಾತಿ ಎನ್ನುವ ಕಾರಣಕ್ಕೆ ತಂದೆ ಮದುವೆ ಮಾಡಿರಲಿಲ್ಲ. ಮೊದಲ ಪ್ರೀತಿಯನ್ನು ಮರೆಯಲು ಸಾಧ್ಯವಾಗ್ತಿಲ್ಲವೆಂದು ಆಕೆ ಹೇಳಿದ್ದಾಳೆ.
ಕೌನ್ಸಿಲರ್ ಪತಿ-ಪತ್ನಿ ಒಂದು ಮಾಡಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಮಕ್ಕಳು ನನ್ನ ಜೊತೆಗಿರಲಿ. ನನಗೆ ಅಭ್ಯಂತರವಿಲ್ಲ. ಆದ್ರೆ ನಾನು ಪ್ರೇಮಿ ಜೊತೆಗಿರುತ್ತೇನೆಂದು ಪತ್ನಿ ಹೇಳಿದ್ದಾಳೆ. ಪತ್ನಿ ಸುಖವನ್ನು ಗಮನದಲ್ಲಿಟ್ಟುಕೊಂಡ ಪತಿ, ಆಕೆಗಾಗಿ ವಿಚ್ಛೇದನ ನೀಡಲು ಸಿದ್ಧ ಎಂದಿದ್ದಾನೆ.
Comments are closed.