ರಾಷ್ಟ್ರೀಯ

ಜೈಪುರದ 21 ವರ್ಷದ ಯುವಕ ರಾಜಸ್ಥಾನದ ಅತೀ ಕಿರಿಯ ನ್ಯಾಯಾಧೀಶ!

Pinterest LinkedIn Tumblr


ಜೈಪುರ್: ರಾಜಸ್ಥಾನ್ ಜ್ಯುಡಿಶಿಯಲ್ ಸರ್ವೀಸಸ್ (ಆರ್ ಜೆಎಸ್) ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮಯಾಂಕ್ ಪ್ರತಾಪ್ ಸಿಂಗ್ (21) ರಾಜಸ್ಥಾನದ ಅತ್ಯಂತ ಕಿರಿಯ ಜಡ್ಜ್ ಆಗಿ ನೇಮಕವಾಗಲಿದ್ದು, ಇತಿಹಾಸ ಬರೆದಿರುವುದಾಗಿ ವರದಿ ತಿಳಿಸಿದೆ.

ಈ ಮೊದಲು ನ್ಯಾಯಾಂಗ ಪರೀಕ್ಷೆ ಬರೆಯಲು ವಯಸ್ಸಿನ ಮಿತಿ 23ಕ್ಕೆ ನಿಗದಿಗೊಳಿಸಲಾಗಿತ್ತು. ಆದರೆ ರಾಜಸ್ಥಾನ್ ಹೈಕೋರ್ಟ್ ಜನವರಿಯಲ್ಲಿ ವಯಸ್ಸಿನ ಮಿತಿಯನ್ನು 21ಕ್ಕೆ ನಿಗದಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಮಯಾಂಕ್ ಪರೀಕ್ಷೆಗೆ ಹಾಜರಾಗಲು ಅರ್ಹತೆ ಪಡೆದುಕೊಂಡಿದ್ದರು.

ಮಾನಸ್ ಸರೋವರ್ ಪ್ರದೇಶದ ನಿವಾಸಿಯಾಗಿರುವ ಮಯಾಂಕ್ ರಾಜಸ್ಥಾನ್ ಯೂನಿರ್ವಸಿಟಿಯಲ್ಲಿ ಐದು ವರ್ಷಗಳ ಕಾನೂನು ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು. ನಂತರ ಜ್ಯುಡಿಶಿಯಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು.

Comments are closed.