
ನವದೆಹಲಿ: ಆಧಾರ್ ಕಾರ್ಡಿನ ಆರು ಬದಲಾವಣೆಗಳಿಗೆ ದಾಖಲೆಯ ಅಗತ್ಯವಿಲ್ಲ ಎಂದು ಯುಐಡಿಎಐ ಹೇಳಿದೆ.
ಫೋಟೋಗ್ರಾಫ್, ಬಯೋಮೆಟ್ರಿಕ್ ಫಿಂಗರ್ ಫ್ರಿಂಟ್, ಐರಿಸ್ ಸ್ಕ್ಯಾನ್, ಲಿಂಗ, ಮೊಬೈಲ್ ನಂಬರ್, ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಬದಲಾವಣೆಗಳಿಗೆ ಯಾವುದೇ ದಾಖಲಾತಿಯನ್ನು ಒದಗಿಸುವ ಅಗತ್ಯವಿಲ್ಲ. ಈ ಆರು ಬದಲಾವಣೆಗಳಿಗಾಗಿ ನಿಮ್ಮ ಆಧಾರ್ ಕಾರ್ಡ್ ಜೊತೆ ತೆರಳಿದರೆ ನಿಮ್ಮ ಆಧಾರ್ ಚೀಟಿ ಅಪ್‍ಡೇಟ್ ಆಗಲಿದೆ.
ಆಧಾರ್ ಕಾರ್ಡ್ ನಲ್ಲಿಯ ನಿಮ್ಮ ವಿಳಾಸವನ್ನು ಬದಲಾಯಿಸಲು ತೆರಳುತ್ತಿದ್ದರೆ ಅಗತ್ಯ ದಾಖಲೆ ಜೊತೆ ನೊಂದಾಯಿಸಿಕೊಂಡ ಮೊಬೈಲ್ ನಂಬರ್ ತೆಗೆದುಕೊಂಡು ಹೋಗಬೇಕು. ವಿಳಾಸ ಬದಲಾವಣೆ ಸಮಯದಲ್ಲಿ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ.
ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಲು ತೆರಳುವವರು ಅಗತ್ಯ ದಾಖಲಾತಿಯನ್ನು ಅಧಿಕಾರಿಗಳ ಮುಂದೆ ಹಾಜರುಪಡಿಸಬೇಕು. ಹೆಸರು, ವಿಳಾಸ, ಮೊಬೈಲ್ ನಂಬರ್, ಇಮೇಲ್, ಹುಟ್ಟಿದ ದಿನಾಂಕ, ಲಿಂಗ, ಬಯೋಮೆಟ್ರಿಕ್ ಬದಲಾವಣೆಗಳಿಗಾಗಿ ನೀವು ಆಧಾರ್ ಸೇವಾ ಕೇಂದ್ರಕ್ಕೆ ತೆರಳಬೇಕು. ಮೊದಲೇ ಯುಐಡಿಎಐ ವೆಬ್‍ಸೈಟ್ ನಲ್ಲಿ ಆಧಾರ್ ಸೇವಾ ಕೇಂದ್ರದಲ್ಲಿ ನೀವು ಅಪಾಯಿಂಟ್‍ಮೆಂಟ್ ಬುಕ್ ಮಾಡಿಕೊಳ್ಳಬಹುದು.
* ಆಧಾರ್ ಸೇವಾ ಕೇಂದ್ರಕ್ಕೆ ತೆರಳಿ ಮೊದಲು ಟೋಕನ್ ಪಡೆಯಬೇಕು.
* ಟೋಕನ್ ಪಡೆದು ನಿಮ್ಮ ಸರದಿ ಬಂದಾಗ ಸಿಬ್ಬಂದಿ ಬಳಿ ತೆರಳುವುದು.
* ಸಿಬ್ಬಂದಿ ನಿಮ್ಮ ಸಲಹೆ ಮೇರೆಗೆ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡುತ್ತಾರೆ.
* ತಿದ್ದುಪಡಿ ಮಾಡಿದ ಬಳಿಕ ಅಧಿಕಾರಿ ನಿಮಗೆ ಬದಲಾದ ಮಾಹಿತಿಯುಳ್ಳ ದಾಖಲೆ ನೀಡುತ್ತಾರೆ.
* ಕೊನೆಗೆ ಶುಲ್ಕ ಪಾವತಿಸುವುದು
* ಹೊಸ ಅರ್ಜಿದಾರರಿಗೆ ಆಧಾರ್ ಸೇವೆ ಉಚಿತವಾಗಿರುತ್ತದೆ.
* ಮಕ್ಕಳ ಬಯೋಮೆಟ್ರಿಕ್ ಸೇವೆ ಉಚಿತ
* ಬಯೋಮೆಟ್ರಿಕ್ ಅಥವಾ ಡಿಮೋಗ್ರಾಫಿಕ್ ಬದಲಾವಣೆಗೆ 50 ರೂ. ಶುಲ್ಕ
Comments are closed.