ರಾಷ್ಟ್ರೀಯ

ಜಾಲತಾಣಗಳಲ್ಲಿ ವೈರಲ್ ಆದ ಈ ಫೋಟೋಕ್ಕೆ ‘ಇದು ಬುದ್ಧಿವಂತ ಮತ್ತು ಮೂರ್ಖನ ನಡುವಿನ ವ್ಯತ್ಯಾಸ’ ಕ್ಯಾಪ್ಷನ್ ಯಾಕೆ.?

Pinterest LinkedIn Tumblr

ನವದೆಹಲಿ: ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ವೈರಲ್ ಆಗಿದೆ. ಪೋಟೋದ ಒಂದು ಭಾಗದಲ್ಲಿ ಗುಜರಾತ್ನಲ್ಲಿ ನಿರ್ಮಿಸಿರುವ ಸರ್ದಾರ್ ವಲ್ಲಭಬಾಯ್ ಪಟೇಲರ ಸ್ಟ್ಯಾಚು ಆಫ್ ಯೂನಿಟಿ ಇದ್ದರೆ, ಮತ್ತೊಂದು ಕಡೆ ಸಮುದ್ರದ ಮೇಲೆ ನಿರ್ಮಿಸಲಾದ ಸೇತುವೆಯಿದೆ. ಪಟೇಲರ ವಿಗ್ರಹದ ಕಡೆ ಭಾರತದ ಪ್ರಧಾನಿ ನರೇಂದ್ರ ಮೋದಿ ಚಿತ್ರವಿದ್ದು, ಸೇತುವೆ ಕಡೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಫೋಟೋ ಇದೆ.

ವಿಗ್ರಹ ನಿರ್ಮಾಣಕ್ಕೆ ಭಾರತ ಸರ್ಕಾರ 3,000 ಕೋಟಿ ರೂ ಖರ್ಚು ಮಾಡಿದೆ. ಮನೋಹರವಾದ ಈ ಸೇತುವೆ ನಿರ್ಮಾಣಕ್ಕೂ ಅಷ್ಟೇ ಮೊತ್ತ ವೆಚ್ಚವಾಗಿದೆ. ಸ್ಟ್ಯಾಚು ಬದಲು ಇಂತಹ ಮೂಲ ಸೌಕರ್ಯಗಳು ಕಲ್ಪಿಸಬಹುದು

‘ಇದು ಬುದ್ಧಿವಂತ ಮತ್ತು ಮೂರ್ಖನ ನಡುವಿನ ವ್ಯತ್ಯಾಸ’ ಎಂದು ತಮಿಳು ಭಾಷೆಯಲ್ಲಿ ಕ್ಯಾಪ್ಷನ್ ನೀಡಲಾಗಿತ್ತು. ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರಾಷ್ಟ್ರೀಯ ಮಾಧ್ಯಮವೊಂದು ನಡೆಸಿದ ಫ್ಯಾಕ್ಟ್​​ಚೆಕ್​ನಲ್ಲಿ ಸುಳ್ಳು ಸುದ್ಧಿ ಎಂಬುದು ಗೊತ್ತಾಗಿದೆ.

ಗೂಗಲ್ ರಿವರ್ಸ್​ ಇಮೇಜ್ ಸರ್ಚಿಂಗ್ ನಡೆಸಿದಾಗ ‘ದನ್ಯಾಂಗ್ ಕುನ್ಶನ್ ಗ್ರ್ಯಾಂಡ್ ಬ್ರಿಡ್ಜ್ ‘ ಎಂಬುದು ತಿಳಿದುಬಂದಿದೆ. ಇದು ಜಗತ್ತಿನ ಅತಿದೊಡ್ಡ ಸೇತುವೆಯಾಗಿದ್ದು, 42. 4 ಕಿಮೀ ಉದ್ದವಿದೆ. ಶಾಂಘಾಯ್ ಮತ್ತು ನ್ಯಾನ್ಜಿಂಗ್ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸೇತುವೆ ನಿರ್ಮಾಣಕ್ಕೆ 1.55 ಬಿಲಿಯನ್ ಡಾಲರ್ ಅಂದರೆ ಭಾರತದ ಕರೆನ್ಸಿಯಲ್ಲಿ 10,000 ಕೋಟಿ ರೂ. ವೆಚ್ಚವಾಗಿದೆ.

Comments are closed.