ರಾಷ್ಟ್ರೀಯ

ಭಾರತವೇ ನಿರ್ಮಿಸಿರುವ ಎಂ777 ಗನ್‌ಗಳನ್ನು ಪಡೆಯಲು ಭಾರತೀಯ ಸೇನೆ ರೆಡಿ.

Pinterest LinkedIn Tumblr

ನವದೆಹಲಿ:  ಭಾರತವು 2016ರ ನವೆಂಬರ್‌ನಲ್ಲಿ ಯುಎಸ್‌ನಿಂದ 145ಹೋವಿಟ್ಜರ್‌ಗಳಿಗೆ ಆದೇಶಿಸಿತ್ತು. ಮುಂದಿನ ವರ್ಷದ ಆರಂಭದಲ್ಲಿ ಹೋವಿಡ್ಜರ್ ಗಳನ್ನು ಸೈನ್ಯಕ್ಕೆ ತಲುಪಿಸುವ ಮೂಲಮ ಸೇನಾ ಬಲವನ್ನು ಶಕ್ತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಪ್ಪಂದದ ಭಾಗವಾಗಿ ಎಂ777 ತಯಾರಕ ಬಿಎಇ ಸಿಸ್ಟಮ್ಸ್ 25 ರೆಡಿಬಿಲ್ಸ್ ಹೋವಿಟ್ಜರ್ ಗಳನ್ನು ಪೂರೈಸಲಿದೆ. ಉಳಿದ 120 ಬಂದೂಕುಗಳನ್ನು ಸ್ಥಳೀಯವಾಗಿ ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ಲಿಮಿಟೆಡ್ ಸಹಯೋಗದೊಂದಿಗೆ ನಿರ್ಮಿಸಲಾಗುತ್ತದೆ ಎಂದು ಹೇಳಿದ್ದಾರೆ.

ಭಾರತೀಯ ಸೇನೆಯು ಭಾರತವೇ ನಿರ್ಮಿಸಿರುವ ಎಂ777 ಗನ್‌ಗಳನ್ನು ಪಡೆಯಲು ಮುಂದಾಗಿದೆ.

ಸೈನ್ಯವು ತನ್ನ ಎಂ777ಗಳನ್ನು ಪೂರ್ವ ಅರುಣಾಚಲ ಪ್ರದೇಶದಲ್ಲಿ ನಿಯೋಜಿಸಲು ತಯಾರಿ ನಡೆಸುತ್ತಿದೆ. ಇದು 2430 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.

ಮೊದಲ ರೆಜೆಮೆಂಟ್ ಅನ್ನು ಹೆಚ್ಚಿಸುತ್ತಿರುವ 18 ಹೋವಿಟ್ಜರ್‌ಗಳಲ್ಲಿ 15 ಅನ್ನು ಬೆಎಇ ಸಿಸ್ಟಮ್ಸ್ ಮತ್ತು ಭಾರತೀಯ ಪಾಲುದಾರ ಮಹೀಂದ್ರಾ ಡಿಫೆನ್ಸ್ ಪೂರೈಸುತ್ತಿದೆ. 2021ರ ಅಂತ್ಯದ ವೇಳೆಗೆ ಸೈನ್ಯವು ಎಲ್ಲಾ 145 ಹೋವಿಟ್ಜರ್‌ಗಳನ್ನು ಪಡೆಯುವ ಸಾಧ್ಯತೆ ಇದೆ.

ಪರ್ವತ ಭೂ ಪ್ರದೇಶದಲ್ಲಿ ಹೊಂದಿಕೊಳ್ಳುವ ನಿಯೋಜನೆಗಾಗಿ ಬಂದೂಕುಗಳನ್ನು ವಿನ್ಯಾಸಗೊಳಿಸಿರುವುದರಿಂದ ಎಂ777 ಗಳು ಸೈನ್ಯದ ಎಫ್‌ಎಆರ್‌ಪಿ ಯೋಜನೆಯ ಪ್ರಮುಖ ಭಾಗವಾಗಿದೆ ಎಂದು ಹೇಳಿದ್ದಾರೆ.

ಮುಂದಿನ 8ರಿಂದ 10 ವರ್ಷಗಳಲ್ಲಿ ಸುಮಾರು 169 ಫಿರಂಗಿ ರೆಜಿಮೆಂಟ್‌ಗಳನ್ನು ಸಜ್ಜುಗೊಳಿಸಲು ಈ ಯೋಜನೆ ಪ್ರಯತ್ನಿಸುತ್ತಿದೆ.

Comments are closed.