ರಾಷ್ಟ್ರೀಯ

ಶಾಲಾ ಮಕ್ಕಳಿಂದ ಮಹಿಳಾ ಅಧಿಕಾರಿಗೆ ಥಳಿತ

Pinterest LinkedIn Tumblr

ರಾಯ್​ಬರೇಲಿ(ಉತ್ತರ ಪ್ರದೇಶ): ಇಲ್ಲಿನ ಛಾಕ್​ ಧೌರಾಹ್ರಾದಲ್ಲಿರುವ ಗಾಂಧಿ ಸೇವಾ ನಿಕೇತನ ಆಶ್ರಮದ ಆಡಳಿತ ಮಂಡಳಿಯ ಅಣತಿಯಂತೆ ಶಾಲಾ ಮಕ್ಕಳು ನನ್ನನ್ನು ನಿಂದಿಸಿದಲ್ಲದೆ, ಹಲ್ಲೆ ಮಾಡಿದರು ಎಂದು ಮಹಿಳಾ ಕಲ್ಯಾಣ ಅಧಿಕಾರಿಯೊಬ್ಬರು ಮಂಗಳವಾರ ಆರೋಪಿಸಿದ್ದಾರೆ.

ನಾನು ಗಾಂಧಿ ಸೇವಾ ನಿಕೇತನ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ನಿಂದಿಸಲು ಹಾಗೂ ಹಲ್ಲೆ ಮಾಡಲು ಸಂಸ್ಥೆಯ ಮ್ಯಾನೇಜರ್​ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿದರು. ನನ್ನ ಮೇಲೆ ವಿದ್ಯಾರ್ಥಿಗಳು ಚೇರಿನಿಂದ ಬಾರಿಸಿದ್ದಲ್ಲದೆ, ಕಪಾಳಮೋಕ್ಷ ಮಾಡಿದರು. ಹೀಗಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್​ ಬಳಿ ದೂರು ದಾಖಲಿಸಿದ್ದೇನೆ ಎಂದು ಹಲ್ಲೆಗೊಳಗಾದ ಮಹಿಳಾ ಅಧಿಕಾರಿ ಮಮತಾ ದುಬೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆಶ್ರಮದ ಆಡಳಿತ ಮಂಡಳಿ ನನಗೆ ತೊಂದರೆ ಕೊಡುತ್ತಿದೆ. ಎರಡು ದಿನಗಳ ಹಿಂದೆ ನಾನು ಶೌಚಗೃಹದ ಒಳಗಡೆ ಇದ್ದಾಗ ಬಾಗಿಲನ್ನು ಲಾಕ್​ ಮಾಡಿ ಬೇಕಂತಲೇ ತೊಂದರೆ ನೀಡಿದ್ದರು. ಹಿಂದಿನಿಂದಲೂ ಹೀಗೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ದುಬೆ ದೂರಿದ್ದಾರೆ.

ಅಧಿಕಾರಿಗೆ ವಿದ್ಯಾರ್ಥಿಗಳು ಥಳಿಸಿದ ಇಡೀ ಘಟನಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Comments are closed.