ರಾಷ್ಟ್ರೀಯ

ಹಿಂದಿಯಲ್ಲಿ ಕುರಾನ್ ಓದುತ್ತಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್

Pinterest LinkedIn Tumblr

ಪಣಜಿ: ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಾನು ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಓದುತ್ತಿರುವುದಾಗಿ ಹೇಳಿದ್ದಾರೆ.

ರವಿವಾರ ತಮ್ಮ ಕ್ಷೇತ್ರ ಸಾಂಕ್ವೆಲಿಂನಲ್ಲಿ ಈದ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನನಗೆ ಕುರಾನ್ ನಲ್ಲಿ ಏನಿದೆ ಎಂಬುದರ ಬಗ್ಗೆ ಬಹಳ ಕುತೂಹಲವಿದೆ. ಹಾಗಾಗಿ ಕೆಲ ದಿನಗಳಿಂದ ನಾನು ಹಿಂದಿಗೆ ಭಾಷಾಂತರಿಸಿದ ಕುರಾನ್ ಓದುತ್ತಿದ್ದೇನೆ ಎಂದು ಹೇಳಿದರು.

ಕುರಾನ್ ನಲ್ಲಿ ತನ್ನ ಧರ್ಮವೇ ಶ್ರೇಷ್ಠ ಎಂದು ಹೇಳಲಾಗಿದೆ. ಆದರೆ ಇತರ ಧರ್ಮಗಳನ್ನೂ ಗೌರವಿಸುವಂತೆ ಹೇಳಿದೆ ಎಂದು ಗೋವಾ ಮುಖ್ಯಮಂತ್ರಿ ಹೇಳಿದ್ದಾರೆ.

Comments are closed.