ರಾಷ್ಟ್ರೀಯ

7 ವರ್ಷಕ್ಕೆ ಕುಸಿದ ಶೇ.40 ರಷ್ಟು ಭಾರತೀಯರ ಜೀವಿತಾವಧಿ

Pinterest LinkedIn Tumblr


ದೆಹಲಿಯ ಎನ್‌ಸಿಆರ್‌ ಪ್ರದೇಶ ಸೇರಿದಂತೆ ಭಾರತದ ಇತರ ರಾಜ್ಯಗಳಲ್ಲಿ ವಾಯು ಗುಣಮಟ್ಟ ಕುಸಿತ ಕಾಣುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಶೇ.40ರಷ್ಟು ಭಾರತೀಯರ ಸರಾಸರಿ ಜೀವಿತಾವಧಿ 7 ವರ್ಷ ಕಡಿಮೆಯಾಗುತ್ತದೆ ಎಂದು ವರದಿಯೊಂದು ಹೇಳಿದೆ.

ಜಾಗತಿಕ ಸಮಸ್ಯೆ
ಕುರಿತು ಚಿಕಾಗೊ ವಿಶ್ವವಿದ್ಯಾನಿಲಯ ಸಮೀಕ್ಷೆಯೊಂದನ್ನು ನಡೆಸಿದ್ದು, ವಾಯುಮಾಲಿನ್ಯ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಹೇಳಿದೆ.

ಕಳಪೆ ಗುಣಮಟ್ಟ
ಎನ್‌ಸಿಆರ್‌ ಪ್ರದೇಶದಲ್ಲಿ ಸತತವಾಗಿ ಮೂರನೇ ದಿನವೂ ವಾಯು ಗುಣಮಟ್ಟದ ಸೂಚ್ಯಂಕ ಕಳಪೆಯಾಗಿದ್ದು, ಗಾಳಿಯ ಗುಣಮಟ್ಟ 412 ಎಕ್ಯೂಐ ದಾಟಿದೆ. ಇದೇ ಪರಿಸ್ಥಿತಿ ಹರಿಯಾಣ ಹಾಗೂ ಪಂಜಾಬ್‌ ರಾಜ್ಯಗಳಲ್ಲಿ ಕಂಡು ಬರುತ್ತಿದ್ದು, ನಾಸಾದ ಉಪಗ್ರಹ ಕಳೆದ ಎಂಟು ದಿಗಳಲ್ಲಿ ಆದ ಬದಲಾವಣೆಯ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.

ವಿಶ್ವದಲ್ಲಿ ಎರಡನೇ ಸ್ಥಾನ
ಅತೀ ಹೆಚ್ಚು ವಾಯುಮಾಲಿನ್ಯ ಉಂಟಾಗುವ ದೇಶಗಳ ಪೈಕಿ ಭಾರತವು ಸ್ಥಾನ ಪಡೆದುಕೊಂಡಿದ್ದು, 225 ದೇಶಗಳ ವಾಯು ಮಾಲಿನ್ಯ ಸೂಚ್ಯಂಕದಲ್ಲಿ ಭಾರತ 2ನೇ ದರ್ಜೆಯಲ್ಲಿದೆ.

ಸರಾಸರಿ ಜೀವಿತಾವಧಿಯಲ್ಲಿ ಇಳಿಕೆ
ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಶಕ್ತಿ ವಾಯು ಮಾಲಿನ್ಯಕ್ಕಿದ್ದು, ವರದಿಯ ಪ್ರಕಾರ ಇತರ ಯಾವುದೇ ಕಾಯಿಲೆ ಅಥವಾ ಕಾರಣಗಳಿಗಿಂತ ವಾಯು ಮಾಲಿನ್ಯವು ವೇಗವಾಗಿ ವ್ಯಕ್ತಿಯ ಸರಾಸರಿ ಜೀವಿತಾವಧಿಯನ್ನು ಕಡಿತಗೊಳಿಸುತ್ತದೆ.

ಶೇ.40 ರಷ್ಟು ಭಾರತೀಯರು ಬೇಗ ಸಾಯ್ತಾರೆ
ಭಾರತದ ಇಂಡೋ-ಗಂಗೆಟಿಕ್‌ ಪ್ಲೆ„ನ್‌ (ಐಜಿಪಿ) ಗ್ಯಾಸ್‌ ಚೇಂಬರ್‌ ಸಂಸ್ಥೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಭಾರತದ ಜನಸಂಖ್ಯೆಯ 40% ರಷ್ಟು ಬಾರತೀಯರು ಸರಾಸರಿ ಜೀವಿತಾವಧಿಗಿಂತ 7 ವರ್ಷ ಬೇಗನೆ ಸಾವನ್ನಪ್ಪುತ್ತಾರೆ ಎಂದು ಹೇಳಿದೆ.

ಟಾಪ್‌ 5 ವಾಯು ಮಾಲಿನ್ಯ ದೇಶಗಳು
ನೇಪಾಲ 55.16%
ಭಾರತ 54.18%
ಬಾಂಗ್ಲಾದೇಶ 53.23%
ಚೀನ 39.5
ಪಾಕಿಸ್ಥಾನ 37.01

ಟಾಪ್‌ 5 ವಾಯುಮಾಲಿನ್ಯ ರಾಜ್ಯಗಳು
ಹೊಸದಿಲ್ಲಿ
ಪಂಜಾಬ್‌
ಹರಿಯಾಣ
ಉತ್ತರಪ್ರದೇಶ
ಚಂಡೀಗಢ

Comments are closed.