ರಾಷ್ಟ್ರೀಯ

1.3 ಮಿಲಿಯನ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಡೇಟಾ ಲೀಕ್.

Pinterest LinkedIn Tumblr

ಭಾರತೀಯರ ಸುಮಾರು 13 ಲಕ್ಷ ಡೆಬಿಟ್​ ಹಾಗೂ ಕ್ರೆಡಿಟ್​ ಕಾರ್ಡ್​ ಮಾಹಿತಿ ಎಲ್ಲವೂ ಸೈಬರ್​ ಕ್ರಿಮಿನಲ್​​ಗಳ ಕೈಗೆ ಸಿಗುವಂತೆ ಡಾರ್ಕ್​​​ ವೆಬ್ ​(ಒಂದು ರೀತಿಯಲ್ಲಿ ಆನ್​​​ಲೈನ್​ ಕಾಳ ಮಾರುಕಟ್ಟೆ ಎಂದು ಕರೆಯಬಹುದು)ನಲ್ಲಿ ಮಾರಾಟಕ್ಕಿರುವ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಸಿಂಗಾಪುರ ಮೂಲದ ಸೈಬರ್ ಸೆಕ್ಯುರಿಟಿ ಕಂಪನಿಯಾದ ಗ್ರೂಪ್-ಐಬಿ ಸಂಶೋಧಕರು ಜೋಕರ್ ಸ್ಟಾಶ್ ಎಂಬ ಡಾರ್ಕ್ ವೆಬ್‌ಸೈಟ್‌ನಲ್ಲಿ ಭಾರತೀಯರ 1.3 ಮಿಲಿಯನ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಡೇಟಾ ಇರುವುದನ್ನು ಕಂಡುಕೊಂಡಿದ್ದಾರೆ.

ಗ್ರೂಪ್-ಐಬಿ ಸಂಶೋಧಕ
ಹೌದು, ಅಕ್ಟೋಬರ್ 28 ರಂದು ಗ್ರೂಪ್-ಐಬಿ ಸಂಶೋಧಕರು ಇಂತಹದೊಂದು ಆಘಾತಕಾರಿ ವಿಷಯವನ್ನು ಕಂಡುಕೊಂಡಿದ್ದು, ಅವರ ಪ್ರಕಾರ ಇದು ಡಾರ್ಕ್ ವೆಬ್‌ನಲ್ಲಿ ಅತಿದೊಡ್ಡ ಮತ್ತು ಅತ್ಯಮೂಲ್ಯವಾದ ಡೇಟಾಬೇಸ್ ಅಪ್‌ಲೋಡ್‌ಗಳಲ್ಲಿ ಒಂದಾಗಿದೆ. ಈ ಡೇಟಾಬೇಸ್ ಮೂಲಕ ಸೈಬರ್ ಖದಿಮರು 130 ಮಿಲಿಯನ್​ ಡಾಲರ್,​ ಅಂದರೆ ಸುಮಾರು ₹920 ಕೋಟಿಗೂ ಹಣ ಗಳಿಸಬಹುದು ಎಂದು ಹೇಳಲಾಗಿದೆ. ZDNet ವರದಿ ಪ್ರಕಾರ, ಈ ಕಾರ್ಡ್​ ಮಾಹಿತಿಗಳು ಜೋಕರ್​ ಸ್ಟ್ಯಾಶ್​​​ನಲ್ಲಿ ಲಭ್ಯವಿದೆ ಎಂದು ತಿಳಿದುಬಂದಿದೆ.

ಡಾರ್ಕ್​​​ ವೆಬ್
ಡಾರ್ಕ್​​​ ವೆಬ್ ಅಂತರ್ಜಾಲದ ಮೂಲಕ ಭಾರತದ ವಿವಿಧ ಬ್ಯಾಂಕ್​ಗಳ ಗ್ರಾಹಕರ ಮಾಹಿತಿಯನ್ನು ತಲಾ 100 ಡಾಲರ್​(ಸರಿಸುಮಾರು ₹7000) ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಜೋಕರ್​ ಸ್ಟ್ಯಾಶ್​ ಈ ಮಾಹಿತಿಯನ್ನು “INDIA-MIX-NEW-01” ಎಂಬ ಶಿರ್ಷಿಕೆ ಅಡಿಯಲ್ಲಿ ಜಾಹಿರಾತು​ ಮಾಡುತ್ತಿದೆ ಎಂದು ಗ್ರೂಪ್-ಐಬಿ ಸಂಶೋಧಕರು ತಿಳಿಸಿದ್ದಾರೆ. ಇನ್ನು ಇದನ್ನು ಇತ್ತೀಚಿನ ವರ್ಷಗಳಲ್ಲಿ ನಡೆದಿರೋ ಅತೀ ದೊಡ್ಡ ಕಾರ್ಡ್​ ಡಂಪ್ ಮಾರಾಟ ಕೂಡ ಎಂದು ಅವರು ಹೇಳಿರುವುದು ಭಾರತೀಯರಿಗೆ ಆಘಾತ ತಂದಿದೆ.

ಭೂಗತ ಮಾರುಕಟ್ಟೆ
ಭೂಗತ ಮಾರುಕಟ್ಟೆಗಳಲ್ಲಿ ಈ ಪ್ರದೇಶದ ಕಾರ್ಡ್‌ಗಳು ಬಹಳ ವಿರಳವಾಗಿದ್ದು, ಕಳೆದ 12 ತಿಂಗಳುಗಳಲ್ಲಿ, ಇದು ಭಾರತೀಯ ಬ್ಯಾಂಕುಗಳಿಗೆ ಸಂಬಂಧಿಸಿದ ಕಾರ್ಡ್ ಡಂಪ್‌ಗಳ ಏಕೈಕ ದೊಡ್ಡ ಮಾರಾಟವಾಗಿದೆ. ಗ್ರೂಪ್-ಐಬಿಯ ಬೆದರಿಕೆ ಗುಪ್ತಚರ ಗ್ರಾಹಕರಿಗೆ ಈ ಡೇಟಾಬೇಸ್ ಮಾರಾಟದ ಬಗ್ಗೆ ಈಗಾಗಲೇ ತಿಳಿಸಲಾಗಿದ್ದು,ಯಾವ ಬ್ಯಾಂಕುಗಳ ಗ್ರಾಹಕರು ಹೆಚ್ಚು ಸಮಸ್ಯೆಗೆ ಸಿಲುಕಿದ್ದಾರೆ ಈ ಸಮಯದಲ್ಲಿ ಸ್ಪಷ್ಟವಾಗಿಲ್ಲ. ಆದಾಗ್ಯೂ, ಗ್ರೂಪ್-ಐಬಿ 18 ಪ್ರತಿಶತದಷ್ಟು ಕಾರ್ಡ್‌ಗಳು ಒಂದೇ ಭಾರತೀಯ ಬ್ಯಾಂಕ್‌ಗೆ ಸಂಬಂಧಿಸಿವೆ ಎಂದು ಹೇಳಲಾಗಿದೆ.

ಜೋಕರ್​ ಸ್ಟ್ಯಾಶ್
ಜೋಕರ್​ ಸ್ಟ್ಯಾಶ್​​ನಲ್ಲಿ ಸಿಗುವ ಈ ಕಾರ್ಡ್​ ಡಂಪ್​ ಖರೀದಿಸುವ ಕ್ರಿಮಿನಲ್​ಗಳು ಈ ಮಾಹಿತಿಯನ್ನು ಬಳಸಿಕೊಂಡು ಎಟಿಎಂಣಲ್ಲಿ ಹಣ ಡ್ರಾ ಮಾಡಿಕೊಳ್ಳುವ ಭಯ ಹೆಚ್ಚಿದೆ. ಹಾಗಾಗಿ, ನೀವು ನಿಮ್ಮ ಡೆಬಿಟ್​ ಹಾಗೂ ಕ್ರೆಡಿಟ್​ ಕಾರ್ಡ್​ ಬಗ್ಗೆ ಎಚ್ಚರವಾಗಿರಿ. ಯಾವುದೇ ಕಾರಣಕ್ಕೂ ನಿಮ್ಮ ಮೊಬೈಲ್‌ಗೆ ಬರುವಂತಹ ಒಟಿಪಿ ಸಂದೇಶವನ್ನು ಯಾರೋಂದಿಗೂ ಹಂಚಿಕೊಳ್ಳಬೇಡಿ. ಯಾರಾದೂ ನಿಮ್ಮೆಲ್ಲಾ ಕಾರ್ಡ್ ಮಾಹಿತಿಯನ್ನು ನೀಡಿ ಬ್ಯಾಂಕ್‌ನವರು ಎಂದು ಹೇಳಿದರೆ, ಶೀಘ್ರವೇ ಪೊಲೀಸ್ ಠಾಣೆಗೆ ದೂರು ದಾಖಲಿಸುವುದನ್ನು ಮರೆಯದಿರಿ.

Comments are closed.