ರಾಷ್ಟ್ರೀಯ

58 ಸಂಸ್ಥೆಗಳಲ್ಲಿ ಇ-ಆಫೀಸ್ ವ್ಯವಸ್ಥೆ ವಿಸ್ತರಣೆಗೆ ಭಾರತೀಯ ರೈಲ್ವೆ ನಿರ್ಧಾರ.

Pinterest LinkedIn Tumblr

ನವದೆಹಲಿ: ಭಾರತೀಯ ರೈಲ್ವೆ ತನ್ನ ಕೆಲಸವನ್ನು ಕಾಗದರಹಿತ, ದಕ್ಷ, ಪಾರದರ್ಶಕ ಮತ್ತು ತ್ವರಿತಗತಿಯಲ್ಲಿ ನಿರ್ವಹಿಸಲು ಇ-ಆಫೀಸ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ ಎಂದು ರೈಲ್ವೆ ಸಚಿವಾಲಯ ಬುಧವಾರ ತಿಳಿಸಿದೆ.

ಸಚಿವಾಲಯವು ರೈಲ್ಟೆಕ್ ಡೇಟಾವನ್ನು ಸಹ ಹಂಚಿಕೊಂಡಿದ್ದು, ಭಾರತೀಯ ರೈಲ್ವೆಯ 58 ಸಂಸ್ಥೆಗಳಲ್ಲಿ 50 ಸಾವಿರಕ್ಕೂ ಅಧಿಕ ಬಳಕೆದಾರರನ್ನು ಸೃಷ್ಟಿಸಿದೆ. ಕಾಗದರಹಿತ ವ್ಯವಹಾರ ನಿರ್ವಹಣೆಗಾಗಿ ಎಲ್ಲಾ ಕಾರ್ಯನಿರ್ವಾಹಕರಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದೆ.

ಫೈಲ್‌ನಲ್ಲಿ ಒಮ್ಮೆ ಬರೆದ ಯಾವುದೇ ಮಾಹಿತಿಯನ್ನು ಆರ್ಕೀವ್ ಮಾಡಲಾಗಿರುವುದರಿಂದ ಈ ವಿಧಾನದ ಅನುಷ್ಠಾನ ಹೆಚ್ಚು ಪಾರ ದರ್ಶಕವಾಗುತ್ತದೆ ಎಂದು ರೈಲ್ವೆ ಸಚಿವಾಲಯ ಅಭಿಪ್ರಾಯಪಟ್ಟಿದೆ. ಇದರೊಂದಿಗೆ ಇ-ಆಫೀಸ್ ವ್ಯವಸ್ಥೆಯ ಅನುಷ್ಠಾನದಿಂದಾಗಿ ಕೆಲಸವನ್ನು ಹೆಚ್ಚು ವ್ಯವಸ್ಥಿತವಾಗಿ ಮಾಡಲು ಸಾಧ್ಯವಾಗುತ್ತದಲ್ಲದೆ, ಸಮಯೋಚಿತವಾಗಿ ಮೇಲ್ವಿಚಾರಣೆಯಿಂದಾಗಿ ಫೈಲ್ ಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸಹಾಯವಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Comments are closed.