ರಾಷ್ಟ್ರೀಯ

ಪತ್ನಿ ಸೋವಿನ ನೋವು ಮರೆಯಲು ಕುಡಿತದ ಚಟ; ಮದ್ಯದ ಅಮಲಿನಲ್ಲೇ ಪುತ್ರಿಯ ಹತ್ಯೆ ಅಪ್ಪ!

Pinterest LinkedIn Tumblr


ಉತ್ತರ ಪ್ರದೇಶ(ಅ.27): ಹೆಂಡತಿಯ ಅಗಲಿಕೆ ನೋವು ಮರೆಯಲು ಕುಡಿತದ ಚಟ ಅಂಟಿಸಿಕೊಂಡಿದ್ದ ವ್ಯಕ್ತಿಯೊಬ್ಬ, ಕುಡಿದ ಅಮಲಿನಲ್ಲಿ ತನ್ನ 17 ವರ್ಷದ ಮಗಳನ್ನೇ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ.

ನೇಮ್​ ಸಿಂಗ್​(52) ಕೊಲೆ ಮಾಡಿದ ಆರೋಪಿ. ಕುಡಿಯಬೇಡ ಎಂದು ಮಗಳು ನಿತೇಶ್ ಸಲಹೆ ನೀಡಿದ್ದರಿಂದ ಕೋಪಗೊಂಡ ಸಿಂಗ್​ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ಸದ್ದು ಕೇಳಿದ ನೆರೆ ಹೊರೆಯವರು ಸಿಂಗ್​ ಮನೆಗೆ ಧಾವಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರ ವಶದದಲ್ಲಿರುವ ಆರೋಪಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

23ನೇ ದಿನಕ್ಕೆ ಕಾಲಿಟ್ಟ ತೆಲಂಗಾಣ ಸಾರಿಗೆ ನೌಕರರ ಮುಷ್ಕರ: ಇನ್ನೂ ಹೋರಾಟಗಾರರ ಬೇಡಿಕೆ ಈಡೇರಿಸದ ಸಿಎಂ ಕೆಸಿಆರ್​​

15 ವರ್ಷಗಳ ಹಿಂದೆ ನೇಮ್​ ಸಿಂಗ್ ​ ಹೆಂಡತಿ ಸಾವನ್ನಪ್ಪಿದ್ದರು. ಪತ್ನಿಯನ್ನು ಕಳೆದುಕೊಂಡ ನೋವಿನಲ್ಲಿ ಸಿಂಗ್​ ಅಂದಿನಿಂದ ಮದ್ಯಪಾನ ಮಾಡಲು ಪ್ರಾರಂಭಿಸಿದ್ದರು. ಅದು ದಿನೇ ದಿನೇ ಹೆಚ್ಚಾಗಿತ್ತು.

ಸಿಂಗ್​ಗೆ ಗೌರವ್​ ಸಿಂಗ್​, ಸೌರಬ್​​ ಸಿಂಗ್ ಮತ್ತು ಮಗಳು ನಿತೇಶ್ ಎಂಬ​ 3 ಜನ ಮಕ್ಕಳಿದ್ದರು. ಕುಡಿತದ ಚಟ ಹೆಚ್ಚಾಗಿ ಸಿಂಗ್​ ದುಡ್ಡಿಗಾಗಿ ತನ್ನ ಹೆಸರಿನಲ್ಲಿದ್ದ ಬೆಲೆಬಾಳುವ ದೊಡ್ಡ ಮೊತ್ತದ ಜಮೀನನ್ನು ಮಾರಾಟ ಮಾಡಿದ್ದ. ಆತನ ಹಿರಿಯ ಮಗ ಗೌರವ್​ ಸಿಂಗ್​ ಮತ್ತು ಮಗಳು ನಿತೇಶ್​ ಅಪ್ಪನ ಕುಡಿತದ ಚಟಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

2 ವರ್ಷಗಳ ಹಿಂದೆ ಗೌರವ್ ಮದುವೆಯಾಗಿ ತನ್ನ ಹೆಂಡತಿ ಜೊತೆ ದೆಹಲಿಗೆ ತೆರಳಿ ಅಲ್ಲಿಯೇ ವಾಸವಿದ್ದ. ಇಲ್ಲಿ ಕಿರಿಯ ಮಗ ಸೌರಬ್​​ ಮತ್ತು ಮಗಳು ನಿತೇಶ್​ ತಂದೆ ಸಿಂಗ್ ಜೊತೆ ಇದ್ದರು. ಈ ಘಟನೆ ನಡೆದಾಗ ಮಗ ಸೌರಬ್​ ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸಿಂಗ್​ನನ್ನು ಬಂಧಿಸಿದ್ದೇವೆ. ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಜೊತೆಗೆ ಆತ ಕೃತ್ಯಕ್ಕೆ ಬಳಸಿದ್ದ ದೇಶೀ ನಿರ್ಮಿತ ಪಿಸ್ತೂಲ್​ನ್ನು ಕೂಡ ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

Comments are closed.