ರಾಷ್ಟ್ರೀಯ

ಬಿಜೆಪಿಯ ‘ಬಿ-ಟೀಮ್’ ಎಂದು ಜೆಜೆಪಿ ತೊರೆದ ಮಾಜಿ ಯೋಧ ತೇಜ್ ಬಹದ್ದೂರ್

Pinterest LinkedIn Tumblr


ಚಂಡೀಘರ್: ಮಾಜಿ ಗಡಿ ಭದ್ರತಾ ಪಡೆ ಸೈನಿಕ ತೇಜ್ ಬಹದ್ದೂರ್ ಯಾದವ್ ಅವರು ಜನನಾಯಕ ಜನತಾ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೆ ಜೆಜೆಪಿಯು ಭಾರತೀಯ ಜನತಾ ಪಕ್ಷದ ಬಿ ಟೀಂ ಇಂದು ಕಿಡಿ ಕಾರಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚಿಸುವ ನಿಟ್ಟಿನಲ್ಲಿ ಜೆಜೆಪಿ ಬಿಜೆಪಿಗೆ ಬೆಂಬಲ ಸೂಚಿಸುವುದರೊಡನೆ ಹರಿಯಾಣ ಮತದಾರರಿಗೆ ದ್ರೋಹ ಬಗೆದಿದೆ ಎಂದು ಅವರು ಹೇಳಿದ್ದಾರೆ.

ಸೈನಿಕರಿಗೆ ನೀಡಲಾಗುವ ಆಹಾರದ ಗುಣಮಟ್ಟದ ಬಗ್ಗೆ ಅಸಮಾಧಾನ ಹೊರಹಾಕುವ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ 2017 ರಲ್ಲಿ ಗಡಿ ಭದ್ರತಾ ಪಡೆಯಿಂದ ವಜಾಗೊಳಿಸಲ್ಪಟ್ಟ ಯಾದವ್, ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ವಿರುದ್ಧ ಕರ್ನಾಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರಿಗೆ ಜೆಜೆಪಿ ಟಿಕೆಟ್ ನೀಡಿತ್ತು.

ಆದರೆ ಯಾದವ್ ಕೇವಲ 3,175 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದರು. “ಚುನಾವಣೆಗೆ ಮುನ್ನವೇ ನಾನು ಜೆಜೆಪಿ ಏನಾದರೂ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಲ್ಲಿ ತಾನು ಪಕ್ಷ ತೊರೆಯುತೇನೆಂದು ಹೇಳಿದ್ದೆ” ಯಾದವ್ ಪಿಟಿಐಗೆ ತಿಳಿಸಿದರು.

ಸರ್ಕಾರವನ್ನು ರಚಿಸುವಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದಕ್ಕಾಗಿ ಮಾಜಿ ಬಿಎಸ್ಎಫ್ ಸೈನಿಕ ದುಶ್ಯಂತ್ ಚೌಟಾಲಾ ನೇತೃತ್ವದ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು, ಜೆಜೆಪಿ ಕೇಸರಿ ಪಕ್ಷದ ‘ಬಿ ಟೀಂ’ ಎಂಬುದು ಈಗ ಸ್ಪಷ್ಟವಾಗಿದೆ.ಬಿಜೆಪಿಯನ್ನು ಬೆಂಬಲಿಸುವ ಮೂಲಕ ಅವರು ಮತದಾರರಿಗೆ ದ್ರೋಹ ಬಗೆದಿದ್ದಾರೆ ಎಂದು ಅವರು ಆರೋಪಿಸಿದರು.

ಇಷ್ಟೇ ಅಲ್ಲದೆ “ಅವರು ಕೇಸರಿ ಪಕ್ಷವನ್ನು ಬೆಂಬಲಿಸಿದ್ದ ಕಾರಣ ಅವರಿಗೆ ಹಣ ಅಥವಾ ಇನ್ನೇನಾದರೂ ಸಿಕ್ಕಿದೆಯೆ ಎಂದು ಬಹಿರಂಗಪಡಿಸಲಿ” ಎಂದು ಸವಾಲು ಹಾಕಿದ್ದಾರೆ.”ಜೆಜೆಪಿಗೆ ಮತ ನೀಡಿದ ಸಾರ್ವಜನಿಕರು ಜೆಜೆಪಿಯ ಈ ಕ್ರಮವನ್ನು ವಿರೋಧಿಸುತ್ತಿದ್ದಾರೆ. ಬಿಜೆಪಿಯನ್ನು ಬೆಂಬಲಿಸುವುದಾಗಿ ಘೋಷಿಸಿದಾಗಿನಿಂದ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಪಕ್ಷದ ಧ್ವಜ ಹಾಗೂ ನಾಯಕರ ಪ್ರತಿಕೃತಿ ದಹಿಸುತ್ತಿದ್ದಾರೆ.”

ವಿಧಾನಸಭಾ ಚುನಾವಣೆಯಲ್ಲಿ ಬಹುಮತದ ಕೊರತೆಯಿದ್ದ ಬಿಜೆಪಿಗೆ ಜೆಜೆಪಿ ಬೆಂಬಲ ನೀಡಿದ ನಂತರ ಬಿಜೆಪಿ ಹರಿಯಾಣದಲ್ಲಿ ಸರ್ಕಾರ ರಚಿಸುವುದಾಗಿ ಹೇಳಿಕೊಂಡಿದೆ. ಈ ಸಂಬಂಧ ಇದಾಗಲೇ ಒಪ್ಪಂದವಾಗಿದ್ದು ಭಾನುವಾರ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರದ ಉಪಮುಖ್ಯಮಂತ್ರಿಯಾಗಿ ಜೆಜೆಪಿ ಅಧಿನಾಯಕ ದುಶ್ಯಂತ್ ಚೌಟಾಲಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Comments are closed.