ರಾಷ್ಟ್ರೀಯ

ನವಜಾತ ಶಿಶುವಿನೊಂದಿಗೆ ಪ್ರಾಣಬಿಟ್ಟ ಮರಾಠಿ ನಟಿ

Pinterest LinkedIn Tumblr

ಸೂಕ್ತ ಸಮಯದಲ್ಲಿ ಆಂಬ್ಯುಲೆನ್ಸ್ ಸಿಗದೇ ಇದ್ದಿದ್ರಿಂದ ಮರಾಠಿ ಚಿತ್ರನಟಿ ಮತ್ತಾಕೆಯ ನವಜಾತ ಶಿಶು ಮೃತಪಟ್ಟಿದ್ದಾರೆ. ಆಂಬ್ಯುಲೆನ್ಸ್ ಸಿಕ್ಕಿದ್ದರೆ ಪೂಜಾ ಜುಂಜರ್ ಬದುಕುತ್ತಿದ್ಲು ಅಂತಾ ಆಕೆಯ ಸಂಬಂಧಿಕರು ಹೇಳ್ತಿದ್ದಾರೆ. ಮುಂಬೈನಿಂದ 950 ಕಿಮೀ ದೂರದಲ್ಲಿರೋ ಹಿಂಗೋಲಿ ಜಿಲ್ಲೆಯಲ್ಲಿ ಈ ವಿಷಾಧನೀಯ ಘಟನೆ ನಡೆದಿದೆ.

ಗರ್ಭಿಣಿಯಾಗಿದ್ದ ಪೂಜಾಗೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಹೆರಿಗೆ ನೋವು ಶುರುವಾಗಿತ್ತು. ಕೂಡಲೇ ಗೋರೆಗಾಂವ್ ನಲ್ಲಿರೋ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಕೆಯನ್ನು ಕರೆದೊಯ್ಯಲಾಯ್ತು. ಅಲ್ಲೇ ಪೂಜಾಗೆ ಹೆರಿಗೆಯಾಗಿದೆ. ಕೆಲ ಹೊತ್ತಿನಲ್ಲೇ ಮಗು ಸಾವನ್ನಪ್ಪಿತ್ತು. ಪೂಜಾಳ ದೇಹಸ್ಥಿತಿ ಕೂಡ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿತ್ತು.

ಹಿಂಗೋಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಆದ್ರೆ ಆಂಬ್ಯುಲೆನ್ಸ್ ಇರಲಿಲ್ಲ. ಖಾಸಗಿ ಆಂಬ್ಯುಲೆನ್ಸ್ ಕರೆಸಿ ಪೂಜಾಳನ್ನು ಕರೆದೊಯ್ಯುವಷ್ಟರಲ್ಲಿ ಪರಿಸ್ಥಿತಿ ಕೈಮೀರಿತ್ತು. ಪೂಜಾ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾಳೆ. 2 ಮರಾಠಿ ಚಿತ್ರಗಳಲ್ಲಿ ಅಭಿನಯಿಸಿದ್ದ ಪೂಜಾ, ಗರ್ಭಿಣಿಯಾಗಿದ್ದ ಕಾರಣ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು.

Comments are closed.