ರಾಷ್ಟ್ರೀಯ

ಮತದಾನೋತ್ತರ ಸಮೀಕ್ಷೆ: ಮಹಾರಾಷ್ಟ್ರ, ಹರ್ಯಾಣದಲ್ಲಿ ಬಿಜೆಪಿ ಅಧಿಕಾರಕ್ಕೆ

Pinterest LinkedIn Tumblr


ನವದೆಹಲಿ: ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿವೆ ಎಂದು ಹಲವು ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.ಇಂದು ಮಹಾರಾಷ್ಟ್ರ, ಹರ್ಯಾಣ ರಾಜ್ಯಗಳ ಜೊತೆಗೆ 18 ರಾಜ್ಯಗಳಲ್ಲಿ 64 ಸ್ಥಾನಗಳಿಗಾಗಿ ಮತದಾನ ಶಾಂತಿಯುತವಾಗಿ ನಡೆಯಿತು.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇದು ಮೊದಲ ಅಗ್ನಿ ಪರೀಕ್ಷೆಯಾಗಿದ್ದು, ಈಗ ಸಮೀಕ್ಷೆಗಳ ಭವಿಷ್ಯದಂತೆ ಎರಡು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನಲಾಗಿದೆ.

ಮಹಾರಾಷ್ಟ್ರ:
ಟೈಮ್ಸ್ ನೌ ನಡೆಸಿದ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ 230 ಸ್ಥಾನಗಳು, ಕಾಂಗ್ರೆಸ್-ಎನ್‌ಸಿಪಿ 48 ಇತರರಿಗೆ 11 ಸ್ಥಾನಗಳು ಲಭಿಸಲಿವೆ ಎಂದು ಹೇಳಿದೆ.

ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯು ಬಿಜೆಪಿ-ಶಿವಸೇನಾಕ್ಕೆ 166 ರಿಂದ 194 ಸ್ಥಾನ, ಕಾಂಗ್ರೆಸ್-ಎನ್‌ಸಿಪಿಗೆ 72 ರಿಂದ 90 ಮತ್ತು ಇತರರಿಗೆ 22 ರಿಂದ 34 ಸ್ಥಾನಗಳಲ್ಲಿ ವಿಜಯಶಾಲಿಯಾಗಲಿದೆ ಎನ್ನಲಾಗಿದೆ.

ಸಿಎನ್‌ಎನ್-ಐಪಿಎಸ್ಒಎಸ್ ಬಿಜೆಪಿ-ಶಿವಸೇನೆಗೆ 243, ಕಾಂಗ್ರೆಸ್-ಎನ್‌ಸಿಪಿಗೆ 41 ಮತ್ತು ಇತರರಿಗೆ 4 ಎಂದು ತಿಳಿಸಿದೆ

ಟಿವಿ 9 ಮರಾಠಿ-ಸಿಸೆರೊ ಸಮೀಕ್ಷೆಯು ಬಿಜೆಪಿ-ಶಿವಸೇನೆಗೆ 197, ಕಾಂಗ್ರೆಸ್-ಎನ್‌ಸಿಪಿಗೆ 75 ಮತ್ತು ಇತರರಿಗೆ 16 ಸ್ಥಾನ ನೀಡಿದೆ.

ಹರ್ಯಾಣ:

ಹರಿಯಾಣದಲ್ಲಿ ಟೈಮ್ಸ್ ನೌ ಸಮೀಕ್ಷೆಯು 90 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿಗೆ 71 ಮತ್ತು ಕಾಂಗ್ರೆಸ್ ಗೆ 11 ಎಂದು ಭವಿಷ್ಯ ನುಡಿದಿದೆ.

ರಿಪಬ್ಲಿಕ್ ಟಿವಿ-ಜನ್ ಕಿ ಬಾತ್ ಸಮೀಕ್ಷೆಯು ಬಿಜೆಪಿಗೆ 52-63 ಮತ್ತು ಕಾಂಗ್ರೆಸ್ 15-19 ಎಂದು ಹೇಳಿದೆ.

ಇಂಡಿಯಾ ನ್ಯೂಸ್-ಪೋಲ್‌ಸ್ಟ್ರಾಟ್ ಸಮೀಕ್ಷೆಯು ಬಿಜೆಪಿಗೆ 75 ರಿಂದ 80 ಮತ್ತು ಕಾಂಗ್ರೆಸ್ ಗೆ 9 ರಿಂದ 12 ಸ್ಥಾನ ಎನ್ನಲಾಗಿದೆ.

ಟಿವಿ 9-ಭರತ್ವರ್ಷ್ ಬಿಜೆಪಿಗೆ 47 ಮತ್ತು ಕಾಂಗ್ರೆಸ್ ಗೆ 23 ಸ್ಥಾನಗಳನ್ನು ನೀಡಿದೆ.

ಬಿಜೆಪಿ-ಶಿವಸೇನೆ ಮಹಾರಾಷ್ಟ್ರದಲ್ಲಿ 211, ಕಾಂಗ್ರೆಸ್ 64 ಮತ್ತು ಇತರರು 13 ಸ್ಥಾನಗಳನ್ನು ಪಡೆಯಲಿದ್ದಾರೆ ಎನ್ನಲಾಗಿದೆ.

ಅದೇ ರೀತಿ ಹರಿಯಾಣದಲ್ಲಿ ಬಿಜೆಪಿಗೆ 66, ಕಾಂಗ್ರೆಸ್ 14, ಐಎನ್‌ಎಲ್‌ಡಿ-ಅಕಾಲಿಸ್ 2 ಮತ್ತು ಇತರರಿಗೆ 8 ಸ್ಥಾನ ಸಿಗುತ್ತವೆ ಎಂದು ಸಮೀಕ್ಷೆ ತಿಳಿಸಿದೆ.

Comments are closed.