ಅಂತರಾಷ್ಟ್ರೀಯ

ವೀಸಾ ಇಲ್ಲದಿದ್ದರೂ ಈ ದೇಶಗಳಿಗೆ ಹೋಗಬಹುದು

Pinterest LinkedIn Tumblr


ವಿದೇಶ ಪ್ರಯಾಣ ಎಂದ ಕೂಡಲೇ ನೆನಪಾಗುವುದು ಪಾಸ್‌ಪೋರ್ಟ್‌ ಮತ್ತು ವೀಸಾ. ಕೆಲವೊಂದು ಸಲ ಈ ಎರಡು ಪ್ರಮುಖ ದಾಖಲೆಗಳು ನಿಗದಿತ ಸಮಯಕ್ಕೆ ಸಿಗದ ಕಾರಣಕ್ಕಾಗಿಯೇ ವಿದೇಶಯಾನವನ್ನು ಅರ್ಧಕ್ಕೆ ನಿಲ್ಲಿಸಬೇಕಾದ ಪರಿಸ್ಥಿತಿಯು ಎದುರಾಗುತ್ತದೆ.

ಆದರೆ ಇದಕ್ಕೆ ಪರಿಹಾರವೆಂಬಂತೆ ಕೆಲವು ದೇಶಗಳಿಗೆ ವೀಸಾ ಕಿರಿಕಿರಿ ಇಲ್ಲದೇ ಫಾರಿನ್ ಟೂರು ಹೋಗಬಹುದಾಗಿದೆ, ಹಾಗಾದರೆ ವೀಸಾ ಇಲ್ಲದೆ ಯಾವೆಲ್ಲಾ ದೇಶಗಳಿಗೆ ಹೋಗಬಹುದೆಂಬ ಮಾಹಿತಿ ಇಲ್ಲಿದೆ.

ಮಕಾವೊ
ಚೀನಾದ ವಿಶೇಷ ಆಡಳಿತ ಪ್ರದೇಶಗಳಲ್ಲಿ ಒಂದಾದ ಮಕಾವೊ(ಮಕಾವು) ನಗರ, ಅತ್ಯಂತ ಆಕರ್ಷಣೀಯ ಪ್ರವಾಸಿ ತಾಣವಾಗಿದ್ದು, 30 ದಿನಗಳ ಕಾಲ ನೀವು ವೀಸಾ ಇಲ್ಲದೇ ಈ ದೇಶದಲ್ಲಿ ಇರಬಹುದು. ಚೀನಾದ ದಕ್ಷಿಣ ಕರಾವಳಿ ತೀರದ ಪರ್ಲ್ ನದಿಯ ದಡ ತೀರದಲ್ಲಿರುವ ಈ ತಾಣ ಉತ್ತಮ ರೆಸಾರ್ಟ್‌ಗಳೊಂದಿಗೆ ಐಷಾರಾಮಿ ವಸತಿ ನಿಲಯಗಳನ್ನು ಒಳಗೊಂಡಿದ್ದು, ಮಾರ್ಚ್‌-ಮೇ ತಿಂಗಳಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವುದು ಒಳಿತು.

ಫಿಜಿ ದ್ವೀಪಗಳು
ವಿಶ್ವದ ಅತ್ಯಂತ ಸಂತೋಷದಾಯಕ ರಾಷ್ಟ್ರಗಳಲ್ಲಿ ಒಂದಾಗಿರುವ ಫಿಜಿ ದ್ವೀಪ ಪ್ರವಾಸಕ್ಕೆ ಸೂಕ್ತ ಸ್ಥಳವಾಗಿದ್ದು, ವೀಸಾ ಇಲ್ಲದೇ 120 ದಿನಗಳ ಕಾಲ ಇಲ್ಲಿ ತಂಗಲು ಅವಕಾಶ ಇದೆ. ಇಲ್ಲಿ 333 ಟೀಪಿಕಲ್‌ ಐಲ್ಯಾಂಡ್‌ಗಳಿದ್ದು, ಇಲ್ಲಿನ ಬೀಚ್‌ ಮತ್ತು ಸ್ಪಾಗಳು ಪ್ರಪಂಚದಾದ್ಯಂತ ಖ್ಯಾತಿ ಪಡೆದಿವೆ. ಸರ್ಫಿಂಗ್‌, ಹೈಕಿಂಗ್‌, ಸ್ಕೈ ಡೈವಿಂಗ್‌ ಮತ್ತು ಜಿಪ್‌-ಲೈನಿಂಗ್‌ ಅಂತಹ ಸಾಹಸ ಆಟೋಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಬ್ಯುಸಿ ಲೈಪ್‌ನಿಂದ ಕೊಂಚ ವಿರಾಮ ತೆಗೆದುಕೊಳ್ಳುವ ಆಲೋಚನೆ ನಿಮ್ಮದಾಗಿದ್ದರೆ ಈ ದ್ವೀಪಕ್ಕೆ ವೀಸಾದ ತಲೆ ನೋವಿಲ್ಲದೆ ಹೋಗಿಬರಬಹುದು.

ಸಮೋವಾ ದ್ವೀಪ
ದ್ವೀಪಗಳ ಪೈಕಿ ಮನೋಹರವಾದ ವಾತವರಣವನ್ನು ಹೊಂದುವ ಮೂಲಕ ಅತ್ಯಂತ ಸುಂದರವಾದ ಐ-ಲ್ಯಾಂಡ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಮೋವಾ ರೋಚಕ ಸಮುದ್ರ ಕಂದಕಗಳನ್ನು, ಗುಹೆಗಳನ್ನು ಮತ್ತು ಆಕರ್ಷಣೀಯ ಜಲಪಾತಗಳನ್ನು ಒಳಗೊಂಡಿದೆ. ಮತ್ತೂ ವಿಶೇಷವೆಂದರೆ ಇಲ್ಲಿನ ಪುರುಷರು ಸ್ಕರ್ಟ್‌ಗಳನ್ನು ಧರಿಸುತ್ತಾರೆ, ಹಾಗೇ ಇಲ್ಲಿ ಆಹಾರವನ್ನು ಭೂಗರ್ಭದಲ್ಲಿ(ಅಂಡರ್‌ಗ್ರೌಂಡ್‌) ತಯಾರಿಸಲಾಗುತ್ತದೆ. ಇನ್ನೂ ಇಲ್ಲಿಗೆ ಭೇಟಿ ನೀಡಲು ಜೂನ್‌-ಸಪ್ಟೆಂಬರ್‌ ತಿಂಗಳು ಉತ್ತಮವಾಗಿದ್ದು, ವೀಸಾ ಇಲ್ಲದೇ 60 ದಿನಗಳು ಇಲ್ಲಿ ಇರಬಹುದು.

ಕುಕ್‌ ದ್ವೀಪಗಳು
ಸುಮಾರು 15 ಇತರೆ ದ್ವೀಪಗಳನ್ನು ತನ್ನ ಮಡಿಲಲ್ಲಿ ಇಟ್ಟಿಕೊಂಡಿರುವ ಈ ಪ್ರದೇಶ ಕಡಲತೀರಗಳಿಗೆ, ಜಲಪಾತಗಳಿಗೆ, ಡೈವಿಂಗ್‌ ತಾಣಗಳಿಗೆ ಮತ್ತು ಪರ್ವತ ಚಾರಣಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಜನರು ತಮ್ಮ ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳನ್ನು ಮಾಡುವ ಮೂಲಕ ಆಹಾರ ಸೇವಿಸುವ ರೂಢಿಯನ್ನು ನಡೆಸಿಕೊಂಡು ಬಂದಿದ್ದು, ಈ ದೇಶಕ್ಕೆ ಭೇಟಿ ನೀಡುವ ಪ್ರಯಾಣಿಕರಿಗೂ ಉತ್ತಮ ಅತಿಥ್ಯವನ್ನು ನೀಡುತ್ತಾರೆ. ಈ ದೇಶಕ್ಕೆ ಪ್ರವಾಸ ಹೋಗಲು ಏಪ್ರಿಲ್‌ -ನವೆಂಬರ್‌ ತಿಂಗಳು ಉತ್ತಮವಾಗಿದ್ದು, ವೀಸಾ ಇಲ್ಲದೇ 31 ದಿನಗಳು ನೀವು ಇಲ್ಲಿ ತಂಗಬಹುದು.

ಜಮೈಕಾ
ಜಮೈಕಾ ಈ ದೇಶದಲ್ಲಿ ವೀಸಾ ಇಲ್ಲದೆ 14 ದಿನಗಳವೆಗೆ ಇರಬಹುದಾಗಿದ್ದು, ತುಂಬಾ ಕಡಿಮೆ ವೆಚ್ಚದಲ್ಲಿ ಈ ದೇಶಕ್ಕೆ ಪ್ರವಾಸಕ್ಕೆ ಹೋಗಿಬರಬಹುದಾಗಿದೆ. ಇಲ್ಲಿ ಸುಂದರವಾದ ಬೆಟ್ಟ ಗುಡ್ಡ, ರೈನ್‌ ಫಾರೆಸ್ಟ್‌ , ಸಮುದ್ರಗಳು ಸೇರಿದಂತೆ ಹತ್ತು ಹಲವಾರು ಪ್ರವಾಸಿ ತಾಣಗಳು ಈ ಪ್ರದೇಶದಲ್ಲಿದ್ದು, ನವೆಂಬರ್‌ -ಡಿಸೆಂಬರ್‌ ತಿಂಗಳು ಪ್ರವಾಸ ಕೈಗೊಳ್ಳುವುದಕ್ಕೆ ಯೋಗ್ಯವಾಗಿದೆ.

Comments are closed.