ರಾಷ್ಟ್ರೀಯ

ಐತಿಹಾಸಿಕ ದಾಖಲೆ: ಇನ್ಸ್​ಸ್ಟಾಗ್ರಾಂನಲ್ಲಿ ಟ್ರಂಪ್ ಮತ್ತು ಒಬಾಮಾರನ್ನು ಹಿಂದಿಕ್ಕಿ 3 ಕೋಟಿ ಫಾಲೋವರ್ಸ್ ಹೊಂದಿದ ಮೋದಿ

Pinterest LinkedIn Tumblr


ಬೆಂಗಳೂರು(ಅ.13): ಇನ್ಸ್​ಸ್ಟಾಗ್ರಾಂನಲ್ಲಿ 30 ಮಿಲಿಯನ್ ಫಾಲೋವರ್ಸ್ ದಾಟಿದ ಜಾಗತಿಕ ನಾಯಕ ಎಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಈಗಾಗಲೇ ಟ್ವಿಟರ್​​​ನಲ್ಲಿ 50 ಮಿಲಿಯನ್ ಅನುಯಾಯಿಗಳು ಹೊಂದಿರುವ ನರೇಂದ್ರ ಮೋದಿ, ಇನ್​​ಸ್ಟಾಗ್ರಾಂನಲ್ಲೂ 30 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ಎಂಬುದೀಗ ಹೊಸ ದಾಖಲೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತುತ ಇನ್ ಸ್ಟಾಗ್ರಾಂನಲ್ಲಿ 14. 9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಹಾಗೆಯೇ ಮಾಜಿ ಅಧ್ಯಕ್ಷ ಬಾರಕ್ ಒಬಾಮಾ ಕೂಡ 24. 8 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಇನ್​​ಸ್ಟಾಗ್ರಾಂನಲ್ಲಿ ಟ್ರಂಪ್ ಹಾಗೂ ಒಬಾಮಾರನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ನಮ್ಮ ಪ್ರಧಾನಿ 30 ಮಿಲಿಯನ್​​​​​ ಫಾಲೋವರ್ಸ್​ ಹೊಂದಿರುವ ಜಾಗತಿಕ ನಾಯಕರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಸೋಷಿಯಲ್​​ ಮೀಡಿಯಾದಲ್ಲಿ ಯುವಕರೊಂದಿಗೆ ಭಾರೀ ಆಕ್ಟೀವ್​​ ಇದ್ದಾರೆ ಎಂಬುದಕ್ಕೆ ಇದುವೇ ಕೈಗನ್ನಡಿ. ಅಲ್ಲದೇ ಈ ಹೊಸ ದಾಖಲೆ ಮೋದಿ ಜನಪ್ರಿಯತೆಯನ್ನು ತೋರಿಸುತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.

ದೇಶದ ಅತ್ಯಂತ ಪ್ರಭಾವಿ ನಾಯಕ ಮೋದಿ. ಡೋನಾಲ್ಡ್​ ಟ್ರಂಪ್​ ಬಳಿಕ ಅಧಿಕ ಹೆಚ್ಚು ಬೆಂಬಲಿಗರನ್ನು ಹೊಂದಿರುವ ವಿಶ್ವದ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅಷ್ಟೇ ಅಲ್ಲದೇ ಮೋದಿಯ ಈ ದಾಖಲೆಯ ಆಸುಪಾಸಿನಲ್ಲಿ ಭಾರತದ ಯಾವುದೇ ರಾಜಕಾರಣಿಗಳು ಇಲ್ಲ ಎಂಬುದು ಗಮನಾರ್ಹ. ಮೋದಿ ಅಧಿಕೃತ ಟ್ವಿಟರ್​​​ ಖಾತೆಯಲ್ಲಿ 50 ಮಿಲಿಯನ್​ ಹಾಗೂ ತಮ್ಮ ಕಚೇರಿಯ ಖಾತೆಯಲ್ಲಿ 30 ಮಿಲಿಯನ್​ ಬೆಂಬಲಿಗರನ್ನು ಹೊಂದಿದ್ದಾರೆ.

Comments are closed.