ರಾಷ್ಟ್ರೀಯ

ನ್ಯೂಯಾರ್ಕ್​​​​ ಬ್ರೂಕ್ಲಿನ್​​ನಲ್ಲಿ ಗುಂಡಿನ ದಾಳಿಗೆ 4 ಮಂದಿ ಬಲಿ

Pinterest LinkedIn Tumblr


ನವದೆಹಲಿ(ಅ.12): ನ್ಯೂಯಾರ್ಕ್​​​​ ಬ್ರೂಕ್ಲಿನ್​​ನಲ್ಲಿ ಬಂದೂಕುಧಾರಿಯೋರ್ವ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ನಾಲ್ಕು ಮಂದಿ ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ. ಇಂದು ಬೆಳಿಗ್ಗೆ ಈ ಗುಂಡಿನ ದಾಳಿ ನಡೆದಿದ್ದು, ಸ್ಥಳದಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ನ್ಯೂಯಾರ್ಕ್​ ಪೊಲೀಸ್​​ ಮೂಲಗಳು ತಿಳಿಸಿವೆ.

ಬ್ರೂಕ್ಲಿನ್​​ನಲ್ಲಿನ ಖಾಸಗಿ ಕ್ಲಬ್​​ವೊಂದರಲ್ಲಿ ಈ ಅಮಾನುಷ ಕೃತ್ಯ ಸಂಭವಿಸಿದೆ ಎಂದು ವಿದೇಶಿ ಮೂಲದ ಅಸೋಸಿಯೇಟೆಡ್​​ ಪ್ರೆಸ್​​ ವರದಿ ಮಾಡಿದೆ. ಅಲ್ಲದೇ ಈ ದಾಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಪೊಲೀಸರು ಯಾರನ್ನೂ ಬಂಧಿಸಿಲ್ಲ ಎಂದು ಕೂಡ ಹೇಳಲಾಗುತ್ತಿದೆ.

ಈ ಗುಂಡಿನ ದಾಳಿಗೆ ನಿಕರವಾದ ಕಾರಣವೇನೆಂದು ತಿಳಿದು ಬಂದಿಲ್ಲ. ಇದರ ಹಿಂದೆ ಯಾರ ಕೈವಾಡವಿದೆ ಎಂಬ ಮಾಹಿತಿಯೂ ಲಭ್ಯವಾಗಿಲ್ಲ. ಹಾಗಾಗಿ ಪ್ರಕರಣ ಸಂಬಂಧ ಯಾರ ಬಂಧನವೂ ಆಗಿಲ್ಲ ಎಂದು ನ್ಯೂಯಾರ್ಕ್​​ ಪೊಲೀಸ್​​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂದೂಕುಧಾರಿ ನಾಲ್ಕು ಬಾರಿ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿದ್ದು ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಲ್ಲದೇ ಮೂವರಿಗೆ ತೀವ್ರ ಗಾಯಗಳಾಗಿವೆ. ಇವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಈಗಾಗಲೇ ನ್ಯೂಯಾರ್ಕ್​​​ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಪ್ರಕರಣದ ಆರೋಪಿಗಳಿಗಾಗಿ ಶೋಧಕಾರ್ಯವೂ ನಡೆಯುತ್ತಿದೆ.

Comments are closed.