ರಾಷ್ಟ್ರೀಯ

ಉತ್ತರಪ್ರದೇಶದ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಕಾರು ಅಪಘಾತ ಪ್ರಕರಣದಲ್ಲಿ ಶಾಸಕ ಸೆಂಗರ್ ಪಾತ್ರವಿಲ್ಲ: ಸಿಬಿಐ

Pinterest LinkedIn Tumblr


ನವದೆಹಲಿ: ಉತ್ತರಪ್ರದೇಶದ ಉನ್ನಾವ್​ ಅತ್ಯಾಚಾರ ಸಂತ್ರಸ್ತೆ ಕಾರು ಅಪಘಾತ ವ್ಯವಸ್ಥಿತಿ ಪಿತೂರಿ. ಈ ಘಟನೆ ಹಿಂದೆ ಬಿಜೆಪಿಯ ಉಚ್ಚಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಹೆಸರು ಬಲವಾಗಿ ಕೇಳಿಬಂದಿತ್ತು. ಘಟನೆ ಸಂಬಂಧ ಸೆಂಗರ್ ಸೇರಿ ಹಲವರ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಬಿಐ, ಇಂದು ಚಾರ್ಜ್​ಶೀಟ್​ ಸಲ್ಲಿಸಿದೆ. ನಾಳೆ ಅಂತಿಮ ವರದಿಯನ್ನು ಸಲ್ಲಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಇದೀಗ ಸಿಬಿಐ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಈ ಕೊಲೆ ಪ್ರಕರಣದಲ್ಲಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಸೇರಿ ಅವರ ಸಹವರ್ತಿಗಳ ಮೇಲೆ ಯಾವುದೇ ಆರೋಪ ಮಾಡಿಲ್ಲ. ಬದಲಿಗೆ ಉತ್ತರಪ್ರದೇಶದ ರಾಯ್​ಬರೇಲಿಯಲ್ಲಿ ಜುಲೈ 28ರಂದು ನಡೆದ ರಸ್ತೆ ಅಪಘಾತದಿಂದ ಕುಟುಂಬದ ಇಬ್ಬರು ಪ್ರಯಾಣಿಕರ ಸಾವಿಗೆ ಚಾಲಕನ ನಿರ್ಲಕ್ಷ್ಯ ಕಾರಣ ಎಂದು ಸಿಬಿಐ ತನ್ನ ಚಾರ್ಜ್​ಶೀಟ್​ನಲ್ಲಿ ಹೇಳಿದೆ.​

2017ರಲ್ಲಿ ಉನ್ನಾವ್​ನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಸೆಂಗಾರ್ ಪ್ರಮುಖ ಆರೋಪಿಯಾಗಿದ್ದಾರೆ. ಜುಲೈ 28ರಂದು ಹಿಂದೆ ರೇಪ್ ಸಂತ್ರಸ್ತೆ ಮತ್ತವರ ಕುಟುಂಬದವರು ತೆರಳುತ್ತಿದ್ದ ಕಾರಿಗೆ ಟ್ರಕ್​ ಬಂದು ಗುದ್ದಿದ ಪರಿಣಾಮ ಕುಟುಂಬದ ಇಬ್ಬರು ಸದಸ್ಯರು ಮೃತಪಟ್ಟಿದ್ದರು. ಸಂತ್ರಸ್ತೆ ಮತ್ತು ಪ್ರಕರಣದ ವಕೀಲ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾದರು. ಈಗಲೂ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಅಪಘಾತ ಪ್ರಕರಣ ಸಂಬಂಧ ಸೆಂಗಾರ್ ಸೇರಿದಂತೆ 25 ಮಂದಿ ವಿರುದ್ಧ ಕೊಲೆ ಆರೋಪದ ಪ್ರಕರಣ ದಾಖಲಾಗಿತ್ತು.

Comments are closed.