ರಾಷ್ಟ್ರೀಯ

ವಿಜಯ ದಶಮಿ ದಿನ ಮೊದಲ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಹಸ್ತಾಂತರ

Pinterest LinkedIn Tumblr

ನವದೆಹಲಿ: ಫ್ರಾನ್ಸ್ ನಿಂದ ಭಾರತಕ್ಕೆ ಪೂರೈಕೆಯಾಗಬೇಕಾದ 36 ಯುದ್ಧ ವಿಮಾನಗಳ ಪೈಕಿ ಮೊದಲ ರಫೇಲ್ ಯುದ್ಧ ವಿಮಾನವು ವಿಜಯ ದಶಮಿ ದಿನವಾದ ಅ.8 ರಂದು ಭಾರತಕ್ಕೆ ಹಸ್ತಾಂತರವಾಗಲಿದೆ.

ಅ.8ರಂದು ಫ್ರಾನ್ಸ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೊದಲ ಬಾರಿಗೆ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಲಘು ಯುದ್ಧ ವಿಮಾನ ತೇಜಸ್ ನಲ್ಲಿ ರಾಜನಾಥ್ ಸಿಂಗ್ ಅವರು ಹಾರಾಟ ನಡೆಸಿದ್ದರು. ಡಸಾಲ್ಟ್ ಏವಿಯೇಷನ್ ನಿಂದ ಭಾರತಕ್ಕೆ ಪೂರೈಕೆಯಾಗಬೇಕಿರುವ 36 ಯುದ್ಧ ವಿಮಾನಗಳ ಪೈಕಿ, ಮೊದಲ ಯುದ್ಧ ವಿಮಾನವನ್ನು ಸ್ವೀಕರಿಸುವ ನಿಟ್ಟಿನಲ್ಲಿ ರಾಜನಾಥ್ ಸಿಂದ್ ಅವರು, 7 ರಿಂದ 3 ದಿನಗಳ ಕಾಲ ಪ್ಯಾರಿಸ್ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲದೆ, ಭಾರತೀಯ ವಾಯುಸೇನೆಯ ಸಂಸ್ಥಾಪನಾ ದಿನವಾದ ಅ.8 ರಂದು ಯುದ್ಧ ವಿಮಾನ ಹಸ್ತಾಂತರ ನಡೆಯಲಿದೆ.

Comments are closed.