ರಾಷ್ಟ್ರೀಯ

ಅ.15 ರವರಗೆ ಡಿಕೆಶಿ ನ್ಯಾಯಾಂಗ ಬಂಧನ ವಿಸ್ತರಣೆ; ಅ.3, 4 ರಂದು ತಿಹಾರ್ ಜೈಲಿನಲ್ಲೇ ಇಡಿ ವಿಚಾರಣೆ!

Pinterest LinkedIn Tumblr

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ದೆಹಲಿ ನ್ಯಾಯಾಲಯವು ಅಕ್ಟೋಬರ್ 15 ರವರೆಗೆ ವಿಸ್ತರಿಸಿದೆ. ಅಲ್ಲದೆ ಅಕ್ಟೋಬರ್ 4 ಮತ್ತು 5 ರಂದು ತಿವಾರ್ ಜೈಲಿನಲ್ಲಿರುವ ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಲು ನ್ಯಾಯಾಲಯ ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿದೆ.

ಶಿವಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿ ಮಂಗಳವಾರ ಕೊನೆಗೊಂಡ ನಂತರ ಅವರನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಈ ವೇಳೆ . ಶಿವಕುಮಾರ್ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಲು ಮತ್ತು ತಿಹಾರ್ ಜೈಲಿನಲ್ಲಿ ಅವರನ್ನು ಪ್ರಶ್ನಿಸಲು ಇಡಿ ಅನುಮತಿ ಕೋರಿತ್ತು.

ಈ ಮುನ್ನ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರ ಮುಂದೆ ಹಾಜರಾಗಿದ್ದ ಶಿವಕುಮಾರ್ ಅವರಿಗೆ ನ್ಯಾಯಾಲಯ ಜಾಮೀನು ನೀಡುವುದಕ್ಕೆ ನಿರ್ಕಾರಿಸಿತ್ತು. ಶಿವಕುಮಾರ್ ಪ್ರಭಾವಿ ವ್ಯಕ್ತಿ ಎಂದು ನ್ಯಾಯಾಲಯ ಗಮನಿಸಿದ್ದು ಅವರೊಮ್ಮೆ ಜಾಮೀನು ಪಡೆದು ಹೊರಬಂದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಅಥವಾ ದಾಖಲೆಗಳನ್ನು ನಾಶಗೊಳಿಸಬಹುದೆಂದು ಹೇಳಿದೆ.

ಶಿವಕುಮಾರ್, ನವದೆಹಲಿಯ ಕರ್ನಾಟಕ ಭವನದ ಉದ್ಯೋಗಿ ಹನುಮಂತಯ್ಯ ಮತ್ತು ಇತರರ ವಿರುದ್ಧ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇಡಿ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು.

Comments are closed.