ರಾಷ್ಟ್ರೀಯ

ಡಿಕೆಶಿ ಬಂಧನದ ಅವಧಿಯನ್ನು ಅಕ್ಟೋಬರ್ 15ರ ತನಕ ವಿಸ್ತರಿಸಿದ ವಿಶೇಷ ನ್ಯಾಯಾಲಯ

Pinterest LinkedIn Tumblr

ಹೊಸದಿಲ್ಲಿ, ಅ.1: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನ್ಯಾಯಾಂಗ ಬಂಧನದ ಅವಧಿಯನ್ನು ಮಂಗಳವಾರ ಈ.ಡಿ ವಿಶೇಷ ನ್ಯಾಯಾಲಯ ಅಕ್ಟೋಬರ್ 15ರ ತನಕ ವಿಸ್ತರಿಸಿದೆ. ದಿಲ್ಲಿ ರೋಸ್ ಅವೆನ್ಯೊ ನ್ಯಾಯಾಲಯವು ಡಿಕೆಶಿ ಬಂಧನದ ಅವಧಿಯನ್ನು ವಿಸ್ತರಿಸಿ ಆದೇಶ ನೀಡಿದೆ.

ಅಕ್ಟೋಬರ್ 4 ಮತ್ತು 5 ರಂದು ತಿಹಾರ್ ಜೈಲಿನಲ್ಲಿ ಡಿಕೆಶಿ ಅವರನ್ನು ಮತ್ತಷ್ಟು ವಿಚಾರಣೆ ನಡೆಸಲು ನ್ಯಾಯಾಲಯ ಜಾರಿ ನಿರ್ದೇಶನಾಲಯ (ಈ.ಡಿ) ಅಧಿಕಾರಿಗಳಿಗೆ ಅನುಮತಿ ನೀಡಿದೆ.

Comments are closed.