ರಾಷ್ಟ್ರೀಯ

ಬಿಜೆಪಿಯಲ್ಲಿ ಪಕ್ಷವಿರೋಧಿ ಚಟುವಟಿಕೆ: 40 ಸದಸ್ಯರ ಉಚ್ಛಾಟನೆ

Pinterest LinkedIn Tumblr


ಡೆಹ್ರಾಡೂನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಲ್ಲಿ ಭಾರತೀಯ ಜನತಾ ಪಕ್ಷದ ಉತ್ತರಾಖಂಡ ಘಟಕವು ತನ್ನ 40 ಸದಸ್ಯರನ್ನು ಉಚ್ಛಾಟಿಸಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಈ ಘಟನೆ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ.

ರಜನೀಶ್ ಶರ್ಮಾ, ಮೀರಾ ರಾಟುರಿ, ಮೋಹನ್ ಸಿಂಗ್ ಬಿಶ್ತ್, ಮಹೇಶ್ ಬಗ್ರಿ, ಪ್ರಮೀಳಾ ಉನಿಯಾಲ್ ಮತ್ತು ಭಾವನ ಸಿಂಗ್ ಸೇರಿದಂತೆ ಒಟ್ಟು 40 ಜನರನ್ನು ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ಉಚ್ಛಾಟಿಸಲಾಗಿದೆ ಎಂದು ತಿಳಿದುಬಂದಿದೆ.

ಜುಲೈ ತಿಂಗಳಲ್ಲಿ ಬಿಜೆಪಿಯು ಪ್ರಣವ್ ಸಿಂಗ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿತ್ತು. ತನ್ನ ಬಾಯಲ್ಲಿ ಮತ್ತು ಕೈಗಳಲ್ಲಿ ಬಂದೂಕು ಹಿಡಿದುಕೊಂಡು ನೃತ್ಯ ಮಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾದ ಬಳಿಕ ಪಕ್ಷದಿಂದ ಅವರನ್ನು ಉಚ್ಛಾಟಿಸಲಾಗಿತ್ತು.

Comments are closed.