ರಾಷ್ಟ್ರೀಯ

ಗಗನಕ್ಕೇರಿದ ಈರುಳ್ಳಿ ಬೆಲೆ: ಲೋಡುಗಟ್ಟಲೆ ಕದ್ದ ಚೋರರು!

Pinterest LinkedIn Tumblr


ಪುಣೆ: ಈರುಳ್ಳಿ ಬೆಲೆ ಗಗನಕ್ಕೇರಿ 80 ರಿಂದ 100 ರೂ ದಾಟಿದೆ. ರೈತರಿಗೆ ಖುಷಿಯ ವಿಚಾರವಾದರೂ ಗ್ರಾಹಕರು ಕಣ್ಣೀರು ಸುರಿಸುತ್ತಿದ್ದಾರೆ. ಈ ನಡುವೆ ಬಿಹಾರದ ಪಾಟ್ನಾ ಹಾಗೂ ಮಹಾರಾಷ್ಟ್ರದ ನಾಸಿಕ್ ನ ಗೋದಾಮಿನಲ್ಲಿ ಲೋಡುಗಟ್ಟಲೆ ಈರುಳ್ಳಿಯನ್ನು ಕಳವು ಮಾಡಲಾಗಿದೆ.

ಪಾಟ್ನಾದ ರೈತರೊಬ್ಬರ ಗೋದಾಮಿನಿಂದ ಸುಮಾರು 8 ಲಕ್ಷ ರೂಪಾಯಿ ಮೌಲ್ಯ ಹಾಗೂ ಮಹಾರಾಷ್ಟ್ರದ ನಾಸಿಕ್‌ನಲ್ಲಿ ರೈತರೊಬ್ಬರ ಗೋದಾಮಿನಿಂದ 1 ಲಕ್ಷ ರೂ. ಮೌಲ್ಯದ ಈರುಳ್ಳಿ ಲೂಟಿಯಾಗಿದೆ.

ಪಾಟ್ನಾದ ರಾಹುಲ್‌ ಬಾಜಿರಾವ್‌ ಪಗಾರ್‌ ಗೋದಾಮಿಲ್ಲಿ 117 ಚೀಲಗಳಲ್ಲಿ 25 ಟನ್‌ ಈರುಳ್ಳಿ ಇಡಲಾಗಿತ್ತು. ಅಪರಿಚಿತ ವ್ಯಕ್ತಿಗಳು ಈ ಕೃತ್ಯ ನಡೆಸಿರುವುದಾಗಿ ಪಗಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಪಾಟ್ನಾದಲ್ಲಿ ಬೆಲೆ ಕೆ.ಜಿ.ಗೆ 100 ರೂ.ಗಳಿಷ್ಟಿದೆ.

ದಿಲ್ಲಿಯಲ್ಲಿ ಈರುಳ್ಳಿ ಬೆಲೆ 70-80 ರೂ.ಗಳಿಗೆ ಏರಿಕೆಯಾಗಿದೆ. ದೇಶಾದ್ಯಂತ ವಿವಿಧ ಮೆಟ್ರೋಗಳಲ್ಲೂ ಈರುಳ್ಳಿ ಬೆಲೆ ಭಾರಿ ಏರಿಕೆಯಾಗಿದೆ.

Comments are closed.