ರಾಷ್ಟ್ರೀಯ

500ಕ್ಕೂ ಹೆಚ್ಚು ಪಾಕಿಸ್ತಾನದ ಉಗ್ರರು ಜಮ್ಮು-ಕಾಶ್ಮೀರದಲ್ಲಿ ಭಾರತದ ಗಡಿಯೊಳಗೆ ನುಸುಳಲು ಸಜ್ಜು: ಬಿಪಿನ್ ರಾವತ್

Pinterest LinkedIn Tumblr

ಚೆನ್ನೈ: ಪಾಕಿಸ್ತಾನದ ಬಾಲಾಕೋಟ್ ಉಗ್ರನೆಲೆಗಳು ಮತ್ತೆ ಕಾರ್ಯಾರಂಭ ಮಾಡಿವೆ ಎಂದು ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಚೆನ್ನೈನಲ್ಲಿ ಮಾತನಾಡಿದ ಅವರು, 500ಕ್ಕೂ ಹೆಚ್ಚು ಪಾಕಿಸ್ತಾನದ ಉಗ್ರರು ಜಮ್ಮು-ಕಾಶ್ಮೀರದಲ್ಲಿ ಭಾರತದ ಗಡಿಯೊಳಗೆ ನುಸುಳಲು ಸಜ್ಜಾಗಿದ್ದಾರೆ ಎಂದು ತಿಳಿಸಿದ್ದಾರೆ.

ಬಾಲಾಕೋಟ್‌ನ ಉಗ್ರ ನೆಲೆಗಳು ಸಕ್ರಿಯವಾಗಿರುವ ವಿಚಾರ, ಭಾರತೀಯ ಸೇನೆಗೆ ಸ್ಪಷ್ಟವಾಗಿ ತಿಳಿದಿದೆ ಎಂದಿರುವ ರಾವತ್, ನಾವು ಈ ಭಾಗದಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಿದ್ದೇವೆ ಎಂದು ಹೇಳಿದ್ದಾರೆ. ಮತ್ತೊಮ್ಮೆ ಬಾಲಾಕೋಟ್‌ಗೆ ನುಗ್ಗಿ ಹೊಡೆಯಲು ಯಾವುದೇ ಹಿಂಜರಿಕೆಯೂ ನಮಗಿಲ್ಲ ಎಂದಿರುವ ರಾವತ್, ಈ ವಿಚಾರದಲ್ಲಿ ಪಾಕಿಸ್ತಾನ ಏನು ಊಹೆ ಮಾಡುತ್ತೆ ನೋಡೋಣ ಬಿಡಿ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಉಗ್ರರು ನುಸುಳುವ ಸಂದರ್ಭದಲ್ಲಿ ಹವಾಮಾನ ಕೂಡಾ ಪ್ರಮುಖ ಪಾತ್ರ ವಹಿಸುತ್ತೆ. ಇದೀಗ ಕಣಿವೆ ರಾಜ್ಯದಲ್ಲಿ ಹಿಮ ಕರಗುತ್ತಿದೆ. ಹೀಗಾಗಿ, ಉಗ್ರರು ಉತ್ತರ ಭಾಗದಿಂದ ನುಸುಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ, ಉಗ್ರರು ನುಸುಳುವ ಸಾಧ್ಯತೆ ಇರುವ ಎಲ್ಲ ಭಾಗಕ್ಕೂ ಸೇನಾಪಡೆಗಳನ್ನು ರವಾನಿಸಲಾಗಿದೆ ಎಂದು ಬಿಪಿನ್ ರಾವತ್ ವಿವರಿಸಿದರು.

ಕಳೆದ ಫೆಬ್ರವರಿಯಲ್ಲಿ ಭಾರತೀಯ ವಾಯುಪಡೆ ಏರ್ ಸರ್ಜಿಕಲ್ ಸ್ಟೈಕ್ ನಡೆಸಿದ ಬಳಿಕ ಪಾಕಿಸ್ತಾನದ ಬಾಲಾಕೋಟ್ ಉಗ್ರ ನೆಲೆ ಸಂಪೂರ್ಣ ಧ್ವಂಸವಾಗಿತ್ತು.

Comments are closed.