ರಾಷ್ಟ್ರೀಯ

ಐಎಎಫ್ ಮುಖ್ಯಸ್ಥರೊಂದಿಗೆ ಮಿಗ್-21 ಯುದ್ಧ ವಿಮಾನ ಚಲಾಯಿಸಿದ ಅಭಿನಂದನ್

Pinterest LinkedIn Tumblr

ನವದೆಹಲಿ: ಡಾಗ್​ ಫೈಟ್​​ನಲ್ಲಿ ಮಿಗ್​-21 ಬೈಸನ್ ಮೂಲಕ ಪಾಕಿಸ್ತಾನದ ಅತ್ಯಾಧುನಿಕ ಎಎಫ್​-16 ಯುದ್ಧ ವಿಮಾನ ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂಧನ್ ವರ್ಧಮಾನ್, ಇಂದು ಮಿಗ್​-21 ​ನಲ್ಲಿ ಹಾರಾಟ ನಡೆಸಿದ್ದಾರೆ. ಅದೂ ವಾಯುಪಡೆಯ ಮುಖ್ಯಸ್ಥ ಬಿ.ಎಸ್​.ಧನೋವಾ ಅವರೊಂದಿಗೆ. ಪಠಾಣ್​​ಕೋಟ್ ವಾಯುನೆಲೆಯಲ್ಲಿ 11.30 ಗಂಟೆಯಲ್ಲಿ 30 ನಿಮಿಷ ಹಾರಾಟ ನಡೆಸಿದರು.

ಪಠಾಣ್​ಕೋಟ್​ ಎಎಎಫ್​ನ ಮುಂಚೂಣಿ ವಾಯು ನೆಲೆಯಾಗಿದ್ದು, ಐಎಎಫ್​ನ 26 ಸ್ಕ್ವಾರ್ಡನ್​ ವಿಮಾನಗಳ ನೆಲೆಯಾಗಿದೆ. ಏರ್​ಚೀಫ್ ಮಾರ್ಷಲ್ ಬಿ.ಎಸ್​.ಧನೋವಾ ಸಹ ಮಿಗ್-21 ಪೈಲಟ್​ ಆಗಿದ್ದು, 1999 ಕಾರ್ಗಿಲ್ ಯುದ್ಧ ಸಮಯದಲ್ಲಿ ಮಿಗ್-21 ಬಳಸಿ ಗಡಿಪ್ರದೇಶದಲ್ಲಿ ಪಾಕಿಸ್ತಾನದ ಅಗತ್ಯ ಸಾಮಗ್ರಿಗಳ ಸರಬರಾಜು ನೆಲೆಗಳನ್ನು ಧ್ವಂಸಗೊಳಿಸಿದ್ದರು. ಕಾರ್ಗಿಲ್ ಯುದ್ಧದಲ್ಲಿ ಭಾರತ ಮೇಲುಗೈ ಸಾಧಿಸಲು ಇದು ಸಾಕಷ್ಟು ನೆರವಾಗಿತ್ತು.

ಎಫ್​-16 ಹೊಡೆದುರುಳಿಸಿದ್ದಕ್ಕಾಗಿ ಅಭಿನಂಧನ್ ವೀರಚಕ್ರ ಪುರಸ್ಕಾರ ಪಡೆದಿದ್ದಾರೆ.

Comments are closed.