ರಾಷ್ಟ್ರೀಯ

ಭಾರತ – ಪಾಕ್ ಗಡಿಯಲ್ಲಿ ಯುದ್ಧದ ಭೀತಿ; ಅಣುಬಾಂಬ್ ಬಳಕೆ ಬಗ್ಗೆ ಪಾಕ್ ಗೆ ರಾಜನಾಥ್ ಸಿಂಗ್ ಎಚ್ಚರಿಕೆ ಸಂದೇಶ

Pinterest LinkedIn Tumblr

ನವದೆಹಲಿ: ಭಾರತ – ಪಾಕ್ ಗಡಿಯಲ್ಲಿ ಯುದ್ಧದ ಭೀತಿ ಎದುರಾಗಿರುವ ಸಂದರ್ಭದಲ್ಲೇ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ಅಣುಬಾಂಬ್ ಬಳಕೆ ಕುರಿತು ಭಾರತ ಪಾಲಿಸಿಕೊಂಡು ಬರುತ್ತಿರುವ ನೋ ಫಸ್ಟ್ ಯೂಸ್ ಪಾಲಿಸಿ(ಮೊದಲು ಬಳಸುವುದಿಲ್ಲ)ಗೆ ನಾವು ಕಟ್ಟು ಬೀಳುವುದಿಲ್ಲ ಎಂದು ಹೇಳುವ ಮೂಲಕ ಪಾಕ್ ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಇಂದು ರಾಜಸ್ಥಾನದ ಪೋಕ್ರಾನ್’ನಲ್ಲಿ ನಡೆದ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಅಣುಬಂಬ್’ಗೆ ಸಂಬಂದಿಸಿದಂತೆ ಭಾರತ ಅಳವಡಿಸಿಕೊಂಡಿರುವ ನೋ ಫಸ್ಟ್ ಯೂಸ್ ಪಾಲಿಸಿಯನ್ನು ಪುನರ್ ಪರಿಶೀಲನೆ ಮಾಡಲಾಗವುದು ಎಂದರು.

ಭವಿಷ್ಯದಲ್ಲಿ ಉದ್ಭವವಾಗುವ ಪರಿಸ್ಥಿತಿಯನ್ನು ಅವಲೋಕಿಸಿ ನೋ ಫಸ್ಟ್ ಪಾಲಿಸಿ ನೀತಿಯಲ್ಲಿ ಬದಲಾವಣೆ ತರಲಾಗುವುದು ಎಂದು ರಕ್ಷಣಾ ಸಚಿವರು ಮಾಹಿತಿ ನೀಡಿದರು.

1998ರಲ್ಲಿ ಭಾರತ ಐದು ಪರಮಾಣು ಪರೀಕ್ಷೆಗಳನ್ನು ನಡೆಸಿದೆ. ಪೋಕ್ರಾನ್-2 ಪರಮಾಣು ಪರೀಕ್ಷೆ ಬಳಿಕ ಭಾರತ ನೋ ಫಸ್ಟ್ ಯೂಸ್ ನೀತಿ ಸ್ವೀಕರಿಸಿತ್ತು. ಈವರೆಗೂ ಭಾರತ ಅದನ್ನು ಪಾಲಿಸಿಕೊಂಡು ಬಂದಿದೆ ಎಂದರು.

ಸದ್ಯ ಮೊದಲು ಬಳಸುವುದಿಲ್ಲ ನೀತಿಯೇ ಮುಂದುವರೆಯಲಿದ್ದು, ದೇಶದ ಭದ್ರತೆ ಮೇಲೆ ಗಂಡಾಂತರ ಎದುರಾದರೆ ಆಗ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದರು.

Comments are closed.