ರಾಷ್ಟ್ರೀಯ

ಬೀಫ್ ಮತ್ತು ಪೋರ್ಕ್ ಅನ್ನು ನಾವು ಒಯ್ಯುವುದಿಲ್ಲ: ಝೊಮ್ಯಾಟೋ ಆಹಾರ ವಿತರಕ ಸಿಬ್ಬಂದಿಗಳಿಂದ ಪ್ರತಿಭಟನೆ

Pinterest LinkedIn Tumblr


ಕೊಲ್ಕೊತ್ತಾ: ಪಶ್ವಿಮ ಬಂಗಾಲದ ಹೌರಾದಲ್ಲಿ ಝೊಮ್ಯಾಟೋ ಆಹಾರ ವಿತರಕ ಸಿಬ್ಬಂದಿಗಳು ದಿಢೀರ್ ಮುಷ್ಕರಕ್ಕೆ ಇಳಿದಿದ್ದಾರೆ. ಇವರ ಈ ಮುಷ್ಕರ ಮತ್ತು ಸಿಟ್ಟಿಗೆ ಕಾರಣ ದನದ ಮಾಂಸ ಮತ್ತು ಹಂದಿ ಮಾಂಸದಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ಪೂರೈಸುವಂತೆ ಸಂಸ್ಥೆಯು ಇವರ ಮೆಲೆ ಒತ್ತಡವನ್ನು ಹೇರುತ್ತಿರುವುದು. ತಮ್ಮ ಬೇಡಿಕೆಗಳಿಗೆ ಸಂಸ್ಥೆಯು ಕಿವಿಗೊಡುತ್ತಿಲ್ಲ ಎಂದು ಝೊಮ್ಯಾಟೋ ಸಿಬ್ಬಂದಿಗಳು ಸುದ್ದಿಸಂಸ್ಥೆಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ನಮ್ಮ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿ ಸಂಸ್ಥೆಯು ನಮಗೆ ಬೀಫ್ ಮತ್ತು ಪೋರ್ಕ್ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ತಲುಪಿಸುವಂತೆ ಒತ್ತಡ ಹೇರುತ್ತಿದೆ. ಇದನ್ನು ಪ್ರತಿಭಟಿಸಿ ನಾವು ಇಂದಿನಿಂದ ಒಂದು ವಾರಗಳವರೆಗೆ ಮುಷ್ಕರ ನಡೆಸಲಿದ್ದೇವೆ ಎಂದು ಝೊಮ್ಯಾಟೋ ಆಹಾರ ವಿತರಕ ಪ್ರತಿನಿಧಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ವಿಚಾರ ಇದೀಗ ಪಶ್ಚಿಮ ಬಂಗಾಲ ಸರಕಾರದ ಗಮನಕ್ಕೂಬಂದಿದ್ದು ಅಲ್ಲಿನ ಸಚಿವ ರಾಜೀಬ್ ಬ್ಯಾನರ್ಜಿ ಅವರು ಈ ವಿಚಾರದ ಕುರಿತು ಮಾಹಿತಿ ಪಡೆದುಕೊಂಡು ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.

‘ಯಾವುದೇ ಸಂಸ್ಥೆಯು ತನ್ನ ಉದ್ಯೋಗಿಗೆ ಆತನ ಧರ್ಮಕ್ಕೆ ವಿರುದ್ಧವಾಗಿ ಹೋಗುವಂತೆ ಬಲವಂತ ಮಾಡಬಾರದು. ಇದು ಖಂಡಿತ ತಪ್ಪು. ಸದರಿ ಪ್ರಕರಣದ ಕುರಿತಾಗಿ ನಾನು ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಮತ್ತು ಇದರ ಕುರಿತಾಗಿ ಗಮನ ಹರಿಸುತ್ತೇನೆ’ ಎಂದು ಬ್ಯಾನರ್ಜಿ ಅವರು ತಿಳಿಸಿದ್ದಾರೆ. ಝೊಮ್ಯಾಟೋ ಆಹಾರ ಪೂರೈಕೆ ಸಂಸ್ಥೆಯು ಇತ್ತೀಚೆಗೆ ಕೆಲವು ಹೊಸ ಹೊಟೇಲುಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ತದನಂತರದಲ್ಲಿ ಈ ಸಮಸ್ಯೆ ಉದ್ಭವಿಸಿದೆ ಎಂದು ಹೇಳಲಾಗುತ್ತಿದೆ.

Comments are closed.