ರಾಷ್ಟ್ರೀಯ

ಆ ಒಂದು ಸಹಿ ಜಮ್ಮು ಮತ್ತು ಕಾಶ್ಮೀರದ 370ನೇ ಕಲಂ ಸಮಾಧಿ

Pinterest LinkedIn Tumblr


ನವದೆಹಲಿ: ಯಾರು ಏನೇ ಮಾಡಿದರೂ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ 370 ಕಲಂ ಅನ್ನು ಕಿತ್ತೋಗೆಯಲು ಸಾಧ್ಯವಿಲ್ಲ ಎಂದುಕೊಂಡಿದ್ದವರಿಗೆ ನಿನ್ನೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶಾಕ್ ನೀಡಿದ್ದು ಆ ಒಂದೇ ಒಂದು ಸಹಿ ಈ ಕಲಂ ಸಮಾಧಿ ಸೇರಿತು.

ಹೌದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಆ ಒಂದು ಸಹಿ ಈ ಕಲಂ ಇತಿಹಾಸದ ಪುಟ ಸೇರುವಂತಾಯಿತು. 370ನೇ ವಿಧಿಯ ಮೂರನೇ ಅಂಶದ – 370(3) ಪ್ರಕಾರ, ರಾಷ್ಟ್ರಪತಿಗಳ ಈ ವಿಧಿ ರದ್ದಾಗಿದೆ ಎಂದು ಘೋಷಿಸುವ ಅಧಿಕಾರವನ್ನು ಹೊಂದಿದ್ದಾರೆ. ಇದಕ್ಕೆ ಜಮ್ಮು ಮತ್ತು ಕಾಶ್ಮೀರದ ಅಸೆಂಬ್ಲಿಯ ಅನುಮತಿ ಬೇಕು ಅಷ್ಟೇ. ಈಗ ಅಲ್ಲಿ ಇರುವುದು ರಾಜ್ಯಪಾಲ ಆಡಳಿತ. ಅದನ್ನೇ ಬಳಸಿಕೊಂಡು ಮೋದಿ-ಶಾ ಕಮಾಲ್ ಮಾಡಿದ್ದಾರೆ.

ವಿಪಕ್ಷಗಳ ಗದ್ದಲದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಂಡಿಸಿದರು. ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಒಳಗೊಂಡಿರುವ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಕ್ ವಿಧಾನಸಭೆ ಒಳಗೊಂಡಿರದ ಕೇಂದ್ರಾಡಳಿತ ಪ್ರದೇಶವಾಗಿದೆ.

Comments are closed.