ರಾಷ್ಟ್ರೀಯ

ಶಿಕ್ಷಕನ ಜೊತೆ ಸೇರಿ ತಂಗಿಯನ್ನೇ ರೇಪ್ ಮಾಡಿ ವಿಡಿಯೋ ಶೇರ್ ಮಾಡಿದ ನಾಲ್ವರು ಸಹೋದರರು ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ !

Pinterest LinkedIn Tumblr

ಲಖನೌ: ತನ್ನ ಸಹೋದರಿ ತಮಗಿಂತ ಚೆನ್ನಾಗಿ ಓದುತ್ತಾಳೆ. ಬುದ್ಧಿವಂತೆ ಎಂಬ ಮತ್ಸರದಿಂದ ನಾಲ್ವರು ಅಣ್ಣಂದಿರೆ ಶಾಲೆಯ ಶಿಕ್ಷಕನ ಜೊತೆ ಸೇರಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿರುವ ಹೇಯ ಕೃತ್ಯ ಬೆಳಕಿಗೆ ಬಂದಿದೆ.

ನಾಲ್ವರು ಸಹೋದರ ಸಂಬಂಧಿಗಳು ಸರ್ಕಾರಿ ಶಾಲೆಯ ಆವರಣದಲ್ಲೇ ಶಿಕ್ಷಕನ ಜೊತೆ ಸೇರಿಕೊಂಡು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೇ ಅದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

ಉತ್ತರ ಪ್ರದೇಶದ ಸೀತಾಪುರದ 8ನೇ ತರಗತಿಯಲ್ಲಿ ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದಳು. ಓದಿನಲ್ಲಿ ಚುರುಕಿದ್ದಳು. ಅಲ್ಲದೆ ಶಾಲೆಯಲ್ಲಿ ಆಕೆ ಮೊದಲ ಸ್ಥಾನ ಗಳಿಸುತ್ತಿದ್ದರಿಂದ ಮತ್ಸರಗೊಂಡ ಅಣ್ಣಂದಿರು ಕಳೆದ ಎರಡು ವರ್ಷಗಳಿಂದ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಇತ್ತೀಚೆಗೆ ಸಾಮೂಹಿಕ ಅತ್ಯಾಚಾರ ನಡೆಸಿದ ವಿಡಿಯೋವನ್ನು ದುರುಳರು ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವಿದ್ಯಾರ್ಥಿನಿಯ ಕುಟುಂಬ ಸದಸ್ಯರಿಗೆ ಸಿಕ್ಕ ನಂತರ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Comments are closed.