
ನವದೆಹಲಿ: ಅಪ್ಲ್ಯಾಸ್ಟಿಕ್ ರಕ್ತಹೀನತೆಯಿಂದ ಬಳಲುತ್ತಿರುವ ಆಗ್ರಾದ ಲಲಿತ್ ಎನ್ನುವ ಬಾಲಕಿಯ ಚಿಕಿತ್ಸೆಗಾಗಿ ಪ್ರಧಾನಿ ನರೇಂದ್ರ 30 ಲಕ್ಷ ರೂ.ಗಳ ಅನುದಾನವನ್ನು ಮಂಜೂರು ಮಾಡಿದ್ದಾರೆ. ಆಕೆಯ ತಂದೆ ಮಗಳ ಚಿಕಿತ್ಸೆಗೆ ಸಹಾಯ ಕೋರಿ ಪ್ರಧಾನಿಗೆ ಪತ್ರ ಬರೆದಿದ್ದರು.
ಈ ಕುರಿತಾಗಿ ಎಎನ್ಐಗೆ ಪ್ರತಿಕ್ರಿಯಿಸಿರುವ ಸುಮೇರ್ ಸಿಂಗ್ ‘ ನನ್ನ ಮಗಳ ಚಿಕಿತ್ಸೆಗೆ ಸರ್ಕಾರ ಸಹಾಯ ಮಾಡಬೇಕೆಂದು ಬಯಸುತ್ತೇನೆ. ಇದಕ್ಕಾಗಿ ನನ್ನ ಭೂಮಿಯನ್ನು ಮಾರಿದ್ದೇನೆ. ನನ್ನ ಮನೆಯನ್ನು ಒತ್ತೆ ಇಡಲಾಗಿದೆ. ನಾನು ಈಗಾಗಲೇ ಅವಳ ಚಿಕಿತ್ಸೆಗೆ 7 ಲಕ್ಷ ರೂ. ಖರ್ಚು ಮಾಡಿದ್ದೇನೆ. ಅವಳನ್ನು ಗುಣಪಡಿಸಲು ಸಾಧ್ಯವಾಗದಿದ್ದರೆ, ನಾನು ಸಾಯುತ್ತೇನೆ” ಎಂದು ಹೇಳಿದರು.
ಆದರೆ, ಈಗ ಸುಮೇರ್ ಸಿಂಗ್ ಸಿಂಗ್ ಅವರ ಮನವಿಗೆ ಸ್ಪಂದಿಸಿದ ಮೋದಿಯವರ ಕಚೇರಿ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಹಣವನ್ನು ಬಿಡುಗಡೆ ಮಾಡಿದೆ.”ಜೈಪುರದ ಆಸ್ಪತ್ರೆ ವೈದ್ಯರು ಆಕೆಗೆ ಮೂಳೆ ಮಜ್ಜೆಯ ಕಸಿ ಅಗತ್ಯವಿದೆಯೆಂದು ಹೇಳಿದ್ದಾರೆ, ಈಗ ಬರಿ ಈ ಆಪರೇಶನ್ ಗೆ 10 ಲಕ್ಷ ರೂಪಾಯಿಗಳಷ್ಟು ವೆಚ್ಚವಾಗಲಿದೆ” ಎಂದು ಸುಮೇರ್ ಸಿಂಗ್ ಹೇಳಿದರು.
ಅಪ್ಲ್ಯಾಸ್ಟಿಕ್ ರಕ್ತ ಹೀನತೆಯು ದೇಹವು ಸಾಕಷ್ಟು ಹೊಸ ರಕ್ತ ಕಣಗಳನ್ನು ಉತ್ಪಾದಿಸುವುದನ್ನು ನಿಲ್ಲಿಸಿದಾಗ ಉಂಟಾಗುವ ಸ್ಥಿತಿಯಾಗಿದೆ. ಅಪ್ಲ್ಯಾಸ್ಟಿಕ್ ರಕ್ತ ಹೀನತೆ ವ್ಯಕ್ತಿಯನ್ನು ಸೋಂಕು ಮತ್ತು ಅನಿಯಂತ್ರಿತ ರಕ್ತ ಸ್ರಾವದ ಹೆಚ್ಚಿನ ಅಪಾಯಕ್ಕೆ ಒಳಪಡಿಸುತ್ತದೆ.
Comments are closed.