ನವದೆಹಲಿ: ವಾಯು ಚಂಡಮಾರುತದ ಗಂಡಾಂತರದಿಂದ ಗುಜರಾತ್ ಕರಾವಳಿ ಭಾಗ ಪಾರಾಗಿದೆ. ಗುಜರಾತ್ ಸಮುದ್ರ ತೀರದ ಪ್ರದೇಶಗಳಿಗೆ ಅಪ್ಪಳಿಸುವ ಮೊದಲೇ ದಿಕ್ಕು ಬದಲಿಸಿದೆ.
ಈ ವಾಯು ಚಂಡಮಾರುತ ಒಮನ್ ದೇಶದ ಕಡೆ ಮುಖ ಮಾಡಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಗುಜರಾತ್ನಲ್ಲಿ ಮುಂಜಾಗ್ರತೆಯಾಗಿ ತೀರ ಭಾಗದ ಜಿಲ್ಲೆಗಳಿಂದ ಮೂರು ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿತ್ತು.
ಅಷ್ಟೇ ಅಲ್ಲದೇ ರೈಲು ಹಾಗೂ ವಿಮಾನಗಳ ಸಂಚಾರ ರದ್ದುಪಡಿಸಲಾಗಿತ್ತು. ಚಂಡಮಾರುತದಿಂದ ಹೆಚ್ಚು ಹಾನಿ ಉಂಟಾಗಬಹುದು ಎಂದು ಗುರುತಿಸಿದ್ದ 10 ಸ್ಥಳಗಳಲ್ಲಿ ನಿಯೋಜನೆಗೊಂಡಿದ್ದ ಸಚಿವರು ಮತ್ತು ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ.
ಸದ್ಯ ನಾಳೆ ಶಾಲೆಗಳು ಪುನರಾರಂಭಗೊಳ್ಳಲಿವೆ. ಸ್ಥಳಾಂತರಗೊಂಡಿದ್ದ ಜನರು ತಮ್ಮ ನಿವಾಸಗಳಿಗೆ ಮರಳಬಹುದು. ಅವರಿಗೆ ಅಗತ್ಯವಿರುವ ಹಣಕಾಸಿನ ನೆರವು ನೀಡಲಾಗುವುದು ಎಂದು ಗುಜರಾತ್ ಸಿಎಂ ವಿಜಯ್ ರೂಪಾಯಿ ಘೋಷಿಸಿದ್ದಾರೆ.