ನವದೆಹಲಿ: ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಪ್ರಧಾನಿ ಮೋದಿ ಮೇಲೆ ಮಾತಿನ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ.
8 ಸದಸ್ಯ ರಾಷ್ಟ್ರಗಳ ಈ ಸಭೆಯಲ್ಲಿ ಮತ್ತೊಬ್ಬ ವೈರಿ ಚೀನಾ ಜೊತೆ ಮೋದಿ ಮಾತುಕತೆ ನಡೆಸಿದರೂ ಪಾಕಿಸ್ತಾನದ ಕಡೆ ತಿರುಗಿಯೂ ನೋಡಿಲ್ಲ. ಇಂದಿನ ಸಭೆಯಲ್ಲಿ ಪರೋಕ್ಷವಾಗಿ ಪಾಕ್‌ನ ಉಗ್ರವಾದದ ಮುಖ ಬಿಚ್ಚಿಟ್ಟಿದ್ದಾರೆ ಮೋದಿ.
ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸುವ, ನೆರವು ನೀಡುವ ಮತ್ತು ಆರ್ಥಿಕ ಬೆಂಬಲ ನೀಡುವ ದೇಶಗಳು ತಕ್ಕ ಬೆಲೆ ತೆರಲೇಬೇಕು ಎಂದು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಭಯೋತ್ಪಾದನೆಮುಕ್ತ ಸಮಾಜದ ನಿರ್ಮಾಣವೇ ಭಾರತದ ದೃಢ ನಿಲುವಾಗಿದೆ ಎಂದು ಪ್ರತಿಪಾದಿಸಿದ ಮೋದಿ, ಭಯೋತ್ಪಾದನೆ ವಿರುದ್ಧ ಸಮರ ಸಾರಲು ಜಾಗತಿಕ ಸಮಾವೇಶದ ಅಗತ್ಯವಿದೆ ಎಂದು ಕರೆ ನೀಡಿದ್ದಾರೆ.
ಸಹಕಾರ ವರ್ಧನೆ ಮತ್ತು ಭಯೋತ್ಪಾದನೆ ವಿರುದ್ಧ ಸಮರದ ಉದ್ದೇಶ ಮತ್ತು ಆದರ್ಶ ಪಟ್ಟಿ ಮಾಡಿದ ಅವರು, ಎಸ್‌ಸಿಓ ಮತ್ತಷ್ಟು ಬಲಗೊಳ್ಳಬೇಕಾದರೆ ಈ ವಿಷಯಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಎಲ್ಲ ದೇಶಗಳು ಸಂಕುಚಿತ ಧೋರಣೆ ಬಿಟ್ಟು ಭಯೋತ್ಪಾದನೆ ಪಿಡುಗಿನ ವಿರುದ್ಧ ಸಮರ ಹೂಡಲು ಒಂದಾಗಬೇಕು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉಪಸ್ಥಿತಿಯಲ್ಲೇ ಪ್ರಧಾನಿ ಮೋದಿ ಸಾರಿದರು. ಎಸ್‌ಸಿಓ ಪ್ರಾದೇಶಿಕ ಭಯೋತ್ಪಾದನೆ ನಿಗ್ರಹ ದಳವನ್ನು ಎಸ್‌ಸಿಓ ಸದಸ್ಯ ರಾಷ್ಟ್ರಗಳು ರೂಪಿಸಿಕೊಳ್ಳಬೇಕು ಎಂದು ಕೂಡ ಸಲಹೆ ನೀಡಿದರು.
ಭಾರತ, ಚೀನಾ, ರಷ್ಯಾ, ಪಾಕಿಸ್ತಾನ, ಕಿರ್ಗಿಸ್ತಾನ ಸೇರಿದಂತೆ 8 ರಾಷ್ಟ್ರಗಳು ಸೇರಿಕೊಂಡು ಈ ಸಂಘಟನೆ ಮಾಡಿಕೊಂಡಿವೆ. ಭಾರತ ಕಳೆದ 12 ವರ್ಷಗಳ ಹಿಂದೆಯೇ ಕಾಯಂ ಸದಸ್ಯ ಸ್ಥಾನ ಪಡೆದಿದೆ.