ಅಮರಾವತಿ: ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವೈ.ಎಸ್ ಜಗನ್ ಮೋಹನ್ ರೆಡ್ಡಿಯವರು, ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಸಿಹಿಸುದ್ದಿ ನೀಡಿದ್ದಾರೆ. ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿದ್ದ ಗೌರವ ಧನ ಮೂರು ಸಾವಿರದಿಂದ ದಿಢೀರ್ 10 ಸಾವಿರಕ್ಕೇರಿಸಿ ಅಧಿಕೃತವಾಗಿ ಘೋಷಿಸಿದ್ದಾರೆ. ಇದರಿಂದ ಕಡಿಮೆ ಸಂಬಳ ಪಡೆಯುತ್ತಿದ್ದ ತಾಯಂದಿರ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು, ಸತತ ಹೊಸ ಯೋಜನೆಗಳನ್ನು ಘೋಷಿಸುತ್ತಲೇ ಇದ್ದಾರೆ. ವೃದ್ಧಾಪ್ಯ ವೇತನ ಹೆಚ್ಚಳ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಇವರೀಗ, ಕಷ್ಟಪಟ್ಟು ದುಡಿಯುವ ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಇಲ್ಲಿಯವರೆಗೂ ಜಗನ್ ಘೋಷಿಸಿದ ಮಹತ್ವ ಯೋಜನೆಗಳು..
ವೃದ್ಧಾಪ್ಯ ವೇತನ 2500 ರುಪಾಯಿಗೆ ಏರಿಕೆ
ಗ್ರಾಮಸೇವಕರು ಎಂಬ ಹುದ್ದೆ ಮೂಲಕ 4 ಲಕ್ಷ ಉದ್ಯೋಗ ಸೃಷ್ಟಿ
ಒಂದು ಹಳ್ಳಿಯಲ್ಲಿ ಪ್ರತಿ 50 ಮನೆಗೆ ಒಬ್ಬ ಗ್ರಾಮ ಸೇವಕನ ನೇಮಕ
ಗ್ರಾಮ ಸೇವಕರಿಗೆ ಪ್ರತಿ ತಿಂಗಳು 5000 ಪಾವತಿಸಲಾಗುತ್ತದೆ
ಲಂಚಕ್ಕೆ ಒತ್ತಾಯಿಸುತ್ತಿದ್ದಲ್ಲಿ ದೂರು ನೀಡಲು ಕಾಲ್ ಸೆಂಟರ್
ಗ್ರಾಮ ಸಚಿವಾಲಯವನ್ನು ಸ್ಥಾಪಿಸಲಾಗುತ್ತದೆ
ದೂರು ನೀಡಿದ 72 ಗಂಟೆಯೊಳಗೆ ಸಮಸ್ಯೆಗೆ ಪರಿಹಾರ
ಸರಕಾರದ ಆಡಳಿತ ವೈಕರಿಯಲ್ಲಿ ಬದಲಾವಣೆ ಭರವಸೆ
ಗುತ್ತಿಗೆಯಲ್ಲಿ ಅವ್ಯವಹಾರಕ್ಕೆ ಕಡಿವಾಣ
ಜಾಗತಿಕ ದರಕ್ಕಿಂತ ಆಂಧ್ರಪ್ರದೇಶದಲ್ಲಿ ವಿದ್ಯುತ್ ದರ ಇಳಿಕೆ