ರಾಷ್ಟ್ರೀಯ

ಚುನಾವಣೋತ್ತರ ಸಮೀಕ್ಷೆ: ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್‌

Pinterest LinkedIn Tumblr


ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದಾಗಲೇ ಚುನಾವಣೋತ್ತರ ಸಮೀಕ್ಷೆಗಳನ್ನು ಉಲ್ಲೇಖೀಸಿ ಊಹಾತ್ಮಕ ಫ‌ಲಿತಾಂಶ ಪ್ರಕಟಿಸಿದ ಹಿನ್ನೆಲೆಯಲ್ಲಿ ಮೂರು ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಚುನಾವಣಾ ಆಯೋಗ (ಇಸಿ) ನೋಟಿಸ್‌ ಜಾರಿಗೊಳಿಸಿದೆ.

48 ಗಂಟೆಗಳೊಳಗೆ ಉತ್ತರಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಲೋಕಸಭೆಯ ಆರಂಭಿಕ ಸುತ್ತುಗಳ‌ ಮತದಾನ ಮುಗಿದ ಬೆನ್ನಲ್ಲೇ ಈ ಮೂರು ಸುದ್ದಿವಾಹಿನಿಗಳು ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿದ್ದವಲ್ಲದೆ, ಸಂಭಾವ್ಯ ಫ‌ಲಿತಾಂಶ ವನ್ನೂ ಅಂದಾಜಿಸಿದ್ದವು. ಇದರ ವಿರುದ್ಧ ಆಯೋಗಕ್ಕೆ ಹಲವಾರು ದೂರುಗಳು ದಾಖಲಾಗಿದ್ದವು. ಈ ಹಿನ್ನೆಲೆ ಯಲ್ಲಿ, ಈ ಸಂಸ್ಥೆಗಳಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ.

ನಿಯಮ ಬಾಹಿರ ನಡೆ: ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಫ‌ಲಿತಾಂಶ ಕುರಿತಂತೆ ಸಮೀಕ್ಷೆಗಳನ್ನು ಪ್ರಕಟಿಸುವುದು ಜನಪ್ರತಿನಿಧಿ ಕಾಯ್ದೆಯ ನಿಯಮಗಳಿಗೆ ವಿರುದ್ಧವಾದದ್ದಾಗಿದೆ. ನಿಯಮ ಪ್ರಕಾರ, ಯಾವುದೇ ಮಾಧ್ಯಮ (ಮುದ್ರಣ, ವಿದ್ಯುನ್ಮಾನ, ಅಂತರ್ಜಾಲ) ಎಲ್ಲ ರಾಜ್ಯಗಳ ಮತದಾನವು ಅಧಿಕೃತವಾಗಿ ಮುಗಿದ ಅರ್ಧ ಗಂಟೆಯವರೆಗೆ ಯಾವುದೇ ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ.

Comments are closed.