ರಾಷ್ಟ್ರೀಯ

ಬಿಜೆಪಿ 280 ಸ್ಥಾನ ಗಳಿಸುವುದು ಕಷ್ಟಕರ- ಶಿವಸೇನೆ

Pinterest LinkedIn Tumblr


ನವದೆಹಲಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಗಳಿಸುವುದು ಕಷ್ಟ ಎಂದು ಶಿವಸೇನಾ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.ಬಿಜೆಪಿ ನಾಯಕ ರಾಮ್ ಮಾಧವ್ ಈ ಬಾರಿ ಬಿಜೆಪಿ ಎನ್ ಡಿಎ ಮೈತ್ರಿಕೂಟದ ಸಹಾಯದಿಂದ ಸರ್ಕಾರ ರಚಿಸಲಿದೆ ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ಈಗ ಸಂಜಯ್ ರಾವತ್ ಹೇಳಿಕೆ ಬಂದಿದೆ.

“ರಾಮ್ ಮಾಧವ್ ಹೇಳಿರುವುದರಲ್ಲಿ ಸರಿ ಇದೆ. ಎನ್ ಡಿ ಎ ಮುಂದಿನ ಬಾರಿ ಸರ್ಕಾರ ರಚನೆ ಮಾಡಲಿದೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಸದ್ಯದ ಪರಿಸ್ಥಿತಿ ನೋಡಿದಲ್ಲಿ ಬಿಜೆಪಿ 280-282 ರ ಗಡಿ ತಲುಪುವುದು ಕಷ್ಟ. ಆದರೆ ಎನ್ ಡಿ ಎ ಒಕ್ಕೂಟ ಬಹುಮತದ ಗಡಿ ದಾಟಲಿದೆ” ಎಂದು ಸಂಜಯ್ ರಾವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ನರೇಂದ್ರ ಮೋದಿ ಪ್ರಧಾನಿಯಾದರೆ ತಮಗೆ ಸಂತೋಷವೆಂದು ತಿಳಿಸಿದರು.

ಬಿಜೆಪಿ ನಾಯಕ ರಾಮ್ ಮಾಧವ್ ಬ್ಲೂಮ್ ಬರ್ಗ್ ಗೆ ನೀಡಿರುವ ಸಂದರ್ಶನದಲ್ಲಿ ” ಒಂದು ವೇಳೆ ನಮಗೆ 271 ಸ್ಥಾನಗಳು ದೊರೆತರೆ ಸಂತೋಷ, ಆದರೆ ಎನ್ಡಿಎ ಸಹಾಯದಿಂದ ನಾವು ಪೂರ್ಣ ಬಹುಮತವನ್ನು ಗಳಿಸುತ್ತೇವೆ” ಎಂದು ಹೇಳಿದ್ದರು. ಸದ್ಯ ಲೋಕಸಭೆಯಲ್ಲಿ ಶಿವಸೇನಾ ಪಕ್ಷವು 18 ಸ್ಥಾನಗಳನ್ನು ಹೊಂದಿದ್ದು. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಭಾಗವಾಗಿದೆ.

Comments are closed.