ರಾಷ್ಟ್ರೀಯ

ತಾಯಿ ,ಪತ್ನಿಯನ್ನು ಗೌರವಿಸದ ಪ್ರಧಾನಿಯನ್ನು ದೇಶ ನಂಬುವುದಿಲ್ಲ: ಮೋದಿ ವಿರುದ್ದ ಮಮತಾ!!

Pinterest LinkedIn Tumblr


ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ಮುಂದುವರೆಸಿದ್ದು. ಭಾನುವಾರ ಪೂರ್ವ ಮಿಡ್ನಾಪುರ ಜಿಲ್ಲೆಯ ಹೆರಿಯಾ ಎಂಬಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮತನಾಡಿದ ಮಮತಾ ಬ್ಯಾನರ್ಜಿ ‘ತಾಯಿಗೆ ಗೌರವ ಕೊಡದ ವ್ಯಕ್ತಿ ದೇಶಕ್ಕೆ ಗೌರವಿಸುತ್ತಾರ ಈ ರೀತಿಯ ಪ್ರಧಾನಿಯನ್ನು ನಾವು ಯಾವತ್ತೂ ನಂಬಬಾರದು ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ತನ್ನ ತಾಯಿಗೆ , ಹೆಂಡತಿಗೆ ಗೌರವ ಕೊಡದ ವ್ಯಕ್ತಿ ನಮಗೆ ಗೌರವದ ಪಾಠ ಹೇಳಿ ಕೊಡಲು ಬರುತ್ತಾರೆ. ಇಂತಹ ಪ್ರಧಾನಿಯನ್ನ ದೇಶ ಎಂದಿಗೂ ನಂಬುವುದಲ್ಲ ಎಂದು ಕಿಡಿಕಾರಿದ್ದಾರೆ . ಅಲ್ಲದೆ ಮೋದಿ ಮಾತನಾಡುವ ಮಾತು ಪ್ರಚೋದನಾಕಾರಿಯಾಗಿದ್ದು ಅವರು ಬಳಸುವ ಭಾಷೆ ನಾಚಿಕೆ ಹುಟ್ಟಿಸುವಂತಿದೆ . ಗಂಭೀರ ವಿಚಾರಗಳು ಎದುರಾದಾಗ ಧಾರ್ಮಿಕತೆಯನ್ನ ಮುಂದೆ ತಂದು ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಬಿಜೆಪಿ ಒಂದು ಸುಳ್ಳುಗಾರರ ಮತ್ತು ಗೂಂಡಾಗಳ ಪಕ್ಷ.

ಗಂಭೀರ ಸಮಸ್ಯೆಗಳ ಬಗ್ಗೆ ಮಾತನಾಡುವ ಬದಲು ಅವರು ಧಾರ್ಮಿಕ ವಿಷಯಗಳನ್ನು ಮಾತನಾಡಿ ಬೇರೆಡೆ ಗಮನ ಸೆಳೆಯುತ್ತಾರೆ. ಈ ರೀತಿ ಚುನಾವಣೆ ನಡೆದರೆ ಮುಂದೆಂದೂ ಚುನಾವಣೆ ನಡೆಯದಂತಾಗುತ್ತದೆ. ಎಲ್ಲರೂ ಧರ್ಮದ ವಿಚಾರಗಳ ವಿರುದ್ದ ಹೋರಾಡೋಣ ಎಂದಿದ್ದಾರೆ.

ಮೋದಿ ನೀವು ನಿಮ್ಮ ಕುಟುಂಬವನ್ನು ನೋಡಿದ್ದೀರಾ? ಎಲ್ಲರನ್ನೂ ಒಂಟಿಯಾಗಿ ಬಿಟ್ಟು ಬಂದಿದ್ದೀರಾ. ನೀವು ನಿಮ್ಮ ಹೆಂಡತಿಯನ್ನು ನೋಡಿದ್ದೀರಾ? ನಿಮ್ಮ ಅಮ್ಮ, ಮಗಳು, ಸಹೋದರಿ ಬದುಕಿದ್ದಾರೆ ಎಂಬುದು ನಿಮಗೆ ಗೊತ್ತೇ? ಎಂದು ಏಪ್ರಿಲ್ 8ರಂದು ಕೂಚ್ ಬೆಹರ್ ಜಿಲ್ಲೆಯಲ್ಲಿ ಭಾಷಣ ಮಾಡಿದ ಮಮತಾ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Comments are closed.