ರಾಷ್ಟ್ರೀಯ

ಭಾರತೀಯ ಸೇನೆಗೆ ‘ಯೇತಿ’ ಎಂಬ ಪೌರಾಣಿಕ ನಿಗೂಢ ಜೀವಿ ಹೆಜ್ಜೆ ಗುರುತು ಪತ್ತೆ!

Pinterest LinkedIn Tumblr


ನವದೆಹಲಿ: ಮಕಾಲು ಬೇಸ್‌ ಕ್ಯಾಂಪ್‌ ಬಳಿ ‘ಯೇತಿ’ ಎಂಬ ಪೌರಾಣಿಕ ಜೀವಿಯ ಹೆಜ್ಜೆ ಗುರುತುಗಳನ್ನು ಕಂಡಿರುವುದಾಗಿ ಭಾರತೀಯ ಸೈನ್ಯಪಡೆ ಮಂಗಳವಾರ ಟ್ವೀಟರ್​ನಲ್ಲಿ ತಿಳಿಸಿದೆ.

ಪರ್ವತಾರೋಣ ತಂಡದ ಜೊತೆಗೆ ಯಾತ್ರೆ ಮಾಡುವ ವೇಳೆ 32*15 ಇಂಚು ಗಾತ್ರದ ಬೃಹತ್ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇದು ಪ್ರಾಚೀನ ಜೀವಿ ‘ಯೇತಿ’ಯದೇ ಇರಬೇಕು ಎಂದು ಸೇನೆಯ ಅಭಿಪ್ರಾಯವಾಗಿದೆ.

ಇದೇ ಮೊದಲ ಬಾರಿಗೆ ಭಾರತೀಯ ಸೇನೆಯ ಪರ್ವತಾರೋಹಣ ತಂಡ ‘ಯೇತಿ’ ಎಂಬ ಪೌರಾಣಿಕ ಜೀವಿಯ ನಿಗೂಢ ಹೆಜ್ಜೆ ಗುರುತುಗಳನ್ನು ಕಂಡಿದೆ. ಮಕಾಲು ಬೇಸ್‌ ಕ್ಯಾಂಪ್ ಬಳಿ ಏಪ್ರಿಲ್ 9, 2019ರಂದು ಈ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ನಿಗೂಢ ಹಿಮ ಮಾನವನ ಹೆಜ್ಜೆ ಗುರುತುಗಳು ಮಕಾಲು-ಬರುನ್ ನ್ಯಾಷನಲ್ ಪಾರ್ಕ್‌ ಬಳಿ ಮಾತ್ರ ಈ ಹಿಂದೆ ಪತ್ತೆಯಾಗಿತ್ತು’ ಎಂದು ಸೇನೆ ಟ್ವೀಟ್ ಮಾಡಿದೆ.

ನಿಗೂಢ ಜೀವಿ ಯೇತಿಯ ಪಾದದ ಗುರುತು ಕಂಡಿರುವುದಾಗಿ ಪರ್ವತಾರೋಹಣ ತಂಡದ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಸೇನೆ, ‘ಹಿಮ ಮಾನವನ ಬಗ್ಗೆ ದಾಖಲೆಗಳಿದ್ದರೆ ಫೋಟೋಗಳನ್ನು ಸೆರೆ ಹಿಡಿದು ವೈಜ್ಞಾನಿಕ ವಿಶ್ಲೇಷಣೆಗಾಗಿ ತಜ್ಞರ ಜತೆ ಹಂಚಿಕೊಳ್ಳಿ’ ಎಂದು ಸಲಹೆ ಕೊಟ್ಟಿದ್ದಾರೆ.

ಪರ್ವತಾರೋಹಿಗಳ ತಂಡ ಯೇತಿಯ ಹೆಜ್ಜೆ ಗುರುತುಗಳ ಫೋಟೋಗಳನ್ನೂ ಕಳುಹಿಸಿತ್ತು. 10 ದಿನಗಳ ಕಾಲ ಆ ದಾಖಲೆಗಳನ್ನು ಹಿಂದಿನ ದಾಖಲೆಗಳ ಜತೆ ಪರಿಶೀಲಿಸಿ ಬಹಳಷ್ಟು ಹೋಲಿಕೆ ಕಂಡು ಬಂದ ಬಳಿಕವಷ್ಟೇ ಬಿಡುಗಡೆ ಮಾಡಲಾಗಿದೆ ಎಂದು ಸೇನೆ ಹೇಳಿದೆ.

Comments are closed.