ರಾಷ್ಟ್ರೀಯ

ಅತೀ ಕಡಿಮೆ ಬೆಲೆಗೆ 4 ಕ್ಯಾಮೆರಾ, ಅದ್ಭುತ ಫೀಚರ್​ವುಳ್ಳ ಫೋನ್!​

Pinterest LinkedIn Tumblr


ಚೀನಾದ ಇನ್​ಫಿನಿಕ್ಸ್​ ಮೊಬೈಲ್​ ಸಂಸ್ಥೆ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ನೂತನ ‘ಸ್ಮಾಟ್​​​ 3 ಪ್ಲಸ್ ‘ ​ಫೋನ್​ವೊಂದನ್ನು ಪರಿಚಯಿಸಿದೆ. ಮೊದಲ ಬಾರಿಗೆ ಮೂರು ಕ್ಯಾಮೆರಾಗಳನ್ನು ಅಳವಡಿಸಿಕೊಂಡು ಗ್ರಾಹಕರ ಗಮನ ಸೆಳೆದಿದೆ.

ಇನ್​ಫಿನಿಕ್ಸ್​​ ‘ಸ್ಮಾರ್ಟ್​3 ಪ್ಲಸ್’​ ಸ್ಮಾರ್ಟ್​ಫೋನ್ ಕ್ವಾಡ್​ ಕೋರ್​ ಹೆಲಿಯೊ ಪ್ರೊಸೆಸರ್​ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಈ ಮೊಬೈಲ್​ 6,999 ರೂ.ಗೆ ಗ್ರಾಹಕರ ಕೈ ಸೇರಲಿದೆ. ಫೋನಿನಲ್ಲಿ ಡ್ಯುಯೆಲ್​ ಸಿಮ್​ ಅಳವಡಿಸಬಹುದಾಗಿದೆ. ಅಂತೆಯೇ ದೀರ್ಘ ಸಮಯದವರೆಗೆ ಬಳಸಬಹುದಾದ 3,500mAh ಬ್ಯಾಟರಿಯನ್ನು ನೀಡಲಾಗಿದೆ.

ಇನ್ನೂ ಮೊಬೈಲ್​ನಲ್ಲಿ ವೈಫೈ, ಬ್ಲೂಟೂತ್​, ಮೈಕ್ರೋ USB, FM​ ರೇಡಿಯೋ, ಪ್ರೋಕ್ಸಿಮಿಟಿ ಸೆನ್ಸಾರ್​, ಫಿಂಗರ್​ ಪ್ರಿಂಟ್​ ಸೆನ್ಸರ್​​​​ ಮತ್ತು ಫೇಸ್​ ಲಾಕ್​​ ಫೀಚರ್ ಅನ್ನು ನೀಡಿದ್ದಾರೆ.​​ ಏ.30 ರಿಂದ ಪ್ಲಿಫ್​ಕಾರ್ಟ್​ನಲ್ಲಿ ದೊರೆಯಲಿದೆ.

ಇನ್​ಫಿನಿಕ್ಸ್​ ಸ್ಮಾರ್ಟ್​ 3 ವಿಶೇಷತೆಗಳು:

ಹಿಂಬದಿ ಕ್ಯಾಮೆರಾ: 13 ಮೆಗಾಫಿಕ್ಸೆಲ್​+ 2 ಮೆಗಾಫಿಕ್ಸೆಲ್​+ 2 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ

ಫ್ರಂಟ್ ಕ್ಯಾಮೆರಾ: 8 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಹೊಂದಿದೆ

ಪ್ರೊಸೆಸರ್: 2GHz ಕ್ವಾಡ್​ ಕೋರ್​ ಹೆಲಿಯೊ A22 ಪ್ರೊಸೆಸರ್​

ರ್ಯಾಮ್​ ಮತ್ತು ಸ್ಟೊರೇಜ್​: 2GB RAM/32GB ಸ್ಟೊರೇಜ್​.

ಒಪರೇಟಿಂಗ್ ಸಿಸ್ಟಂ: ಆಂಡ್ರಾಯ್ಡ್ XOS 5.0

ಬ್ಯಾಟರಿ: 3,500mAh ಬ್ಯಾಟರಿ ಸಾಮರ್ಥ್ಯ,

ಕನೆಕ್ಟಿವಿಟಿ: ಡ್ಯುಯಲ್ ಸಿಮ್​ (ನ್ಯಾನೊ+ ನ್ಯಾನೊ)

ಸೆಕ್ಯೂರಿಟಿ: ಫಿಂಗರ್​ ಪ್ರಿಂಟ್ ಸ್ಕ್ಯಾನರ್​, ಫೇಸ್​ ಅನ್​​ಲಾಕ್​

ಅಂದಾಜು ಬೆಲೆ: 6,999 ರೂ

Comments are closed.