ರಾಷ್ಟ್ರೀಯ

ಸಹೋದರ ರಾಹುಲ್ ಕರಾಟೆ ಪಟು, ಪೈಲಟ್‌, ಪುರಾಣ ಪಂಡಿತ: ಪ್ರಿಯಾಂಕಾ ಗಾಂಧಿ!

Pinterest LinkedIn Tumblr


ವಯನಾಡು: ತಮ್ಮ ಸೋದರ ರಾಹುಲ್‌ ಪರ, ಪ್ರಿಯಾಂಕಾ ಗಾಂಧಿ, ಶನಿವಾರ ಭರ್ಜರಿ ಬ್ಯಾಟಿಂಗ್‌ ನಡೆಸಿದ್ದಾರೆ. ವಯನಾಡಿನಲ್ಲಿ ಮೊದಲ ಪ್ರಚಾರ ರಾರ‍ಯಲಿಯಲ್ಲಿ ಮಾತನಾಡಿದ ಅವರು ಭಾವನಾತ್ಮಕವಾಗಿ ಜನರ ಮನಸು ಗೆಲ್ಲುವ ಯತ್ನ ಮಾಡಿದರು.

ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು, ನಮ್ಮ ಕುಟುಂಬದ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ. ಇದರ ಹೊರತಾಗಿಯೂ ಅವರ ಬಗ್ಗೆ ರಾಹುಲ್‌ಗೆ ಯಾವುದೇ ದ್ವೇಷದ ಭಾವನೆ ಹೊಂದಿಲ್ಲ. ನಮ್ಮ ಕುಟುಂಬದ ವಿರುದ್ಧ ವೈಯಕ್ತಿಕ ದಾಳಿ ನಡೆಸಿ, ನಮ್ಮ ತಾಯಿಯನ್ನು ಅವಮಾನಿಸಿದ, ತಂದೆಯ ಬಲದಾನ ಪ್ರಶ್ನಿಸಿದ ವ್ಯಕ್ತಿ (ಮೋದಿ)ಯನ್ನೂ ಅಪ್ಪಿಕೊಳ್ಳುವ ಧೈರ್ಯವನ್ನು ರಾಹುಲ್‌ ಗಾಂಧಿ ತೋರಿದರು.

ನನ್ನ ಸೋದರಗೆ ಮಹಾಕಾವ್ಯ ಮತ್ತು ಪುರಾಣಗಳು ಗೊತ್ತು. ಆತ ಬ್ಲ್ಯಾಕ್‌ ಬೆಲ್ಟ್‌ ಕೂಡಾ ಹೊಂದಿದ್ದಾನೆ, ಚಾರಣಿಗ, ತರಬೇತಿ ಪಡೆದ ಪೈಲಟ್‌, ಅತ್ಯುತ್ತಮ ಡೈವರ್‌. ಇಂಥ ನನ್ನ ಸೋದರನನ್ನು ನಾನು ನಿಮ್ಮ ಕೈಗೆ ಒಪ್ಪಿಸುತ್ತಿದ್ದೇನೆ. ಆತ ಎಂದಿಗೂ ನೀವು ತಲೆ ತಗ್ಗಿಸುವಂತೆ ಮಾಡುವುದಿಲ್ಲ, ಹೀಗಾಗಿ ಆತನನ್ನು ಬೆಂಬಲಿಸಿ, ಆತ ಎಂದೆಂದಿಗೂ ನಿಮ್ಮ ಜೊತೆ ಇರುತ್ತಾನೆ ಎಂದು ಪ್ರಿಯಾಂಕಾ ಮನವಿ ಮಾಡಿದರು.

Comments are closed.