ರಾಷ್ಟ್ರೀಯ

‘ನೀನು ನನ್ನ ಜೊತೆ ಸೆಕ್ಸ್ ಮಾಡದಿದ್ದರೆ ನಾನು ಕಾಯಿಲೆ ಬೀಳ್ತೇನೆ’; ಮಹಿಳೆಯನ್ನು ಸೆಕ್ಸ್’ಗೆ ಬಲವಂತ ಮಾಡಿದ ಅಪರಿಚಿತ ವ್ಯಕ್ತಿ

Pinterest LinkedIn Tumblr

ಗಾಂಧಿನಗರ: ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ಬಂದು ತನ್ನ ಕೈಗಳನ್ನು ಹಿಡಿದು ತನ್ನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸುತ್ತಿದ್ದಾನೆ ಎಂದು 24 ವರ್ಷದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿರುವ ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ.

ಈ ಘಟನೆ ನಗರದ ಜುಹಾಪುರ ಪ್ರದೇಶದಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿ ಮನೆಗೆ ಬಂದು, “ನನಗೆ ವೈದ್ಯರು ಸೆಕ್ಸ್ ಮಾಡುವಂತೆ ಸಲಹೆ ನೀಡಿದ್ದಾರೆ. ನೀನು ನನ್ನನ್ನು ಪ್ರೀತಿಸದಿದ್ದರೆ, ಒಂದು ವೇಳೆ ನನ್ನ ಜೊತೆ ಸೆಕ್ಸ್ ಮಾಡದೇ ಇದ್ದರೆ ನಾನು ಅನಾರೋಗ್ಯಕ್ಕೆ ಒಳಗಾಗುತ್ತೇನೆ” ಎಂದು ಬೇಡಿಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನನ್ನ ಪತಿ ಆಫಿಸ್‍ಗೆ ಹೋದ ಬಳಿಕ ನಾನು ಒಬ್ಬಳೇ ಮನೆ ಕೆಲಸ ಮಾಡುತ್ತಿದ್ದೆ. ಈ ವೇಳೆ ಗಡ್ಡ ಬಿಟ್ಟಿದ್ದ ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ಬಂದನು. ಮನೆಗೆ ಬಂದಾಕ್ಷಣ ನೀನು ತುಂಬಾ ಸುಂದರವಾಗಿದ್ದೀಯ, ನಿನ್ನಂತ ಹುಡುಗಿಯನ್ನೇ ನಾನು ಮದುವೆಯಾಗಬೇಕೆಂದು ಇಷ್ಟಪಟ್ಟಿದ್ದೇನೆ ಎಂದು ಹೇಳಿದನು.

ಅಷ್ಟೇ ಅಲ್ಲದೇ ಆತ ನನ್ನ ಬಳಿ ಬಂದು ಕೈ ಹಿಡಿದುಕೊಂಡು ಲೈಂಗಿಕ ಸಂಬಂಧ ಬೆಳೆಸುವಂತೆ ಒತ್ತಾಯ ಮಾಡಿದನು. ನಾನು ಸೆಕ್ಸ್ ಮಾಡದಿದ್ದರೆ ಕಾಯಿಲೆ ಬೀಳುತ್ತೇನೆ ಎಂದು ವೈದ್ಯರು ಹೇಳಿದ್ದಾರೆ. ಆದ್ದರಿಂದ ನೀನು ನನ್ನ ಜೊತೆ ಸೆಕ್ಸ್ ಮಾಡು ಎಂದು ಕೇಳಿಕೊಂಡನು. ಅದಕ್ಕೆ ನಾನು ಈಗಾಗಲೇ ನನಗೆ ಮದುವೆಯಾಗಿದೆ. ನನ್ನ ಪತಿ ಕೆಲಸಕ್ಕೆ ಹೋಗಿದ್ದಾರೆ. ದಯವಿಟ್ಟು ನನ್ನನ್ನು ಬಿಟ್ಟುಬಿಡು ನಾನು ಗರ್ಭಿಣಿ ಅಂತ ಹೇಳಿಕೊಂಡೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಇದೆಲ್ಲವನ್ನು ಕೇಳಿಸಿಕೊಂಡರೂ ಆತ ನೀನು ನನ್ನ ಸ್ನೇಹಿತೆ ಇದ್ದಂತೆ. ನಾಮ್ಮಿಬ್ಬರು ಒಂದೇ ಗ್ರಾಮದವರಾಗಿದ್ದೇವೆ. ಹೀಗಾಗಿ ನೀನು ನನ್ನನ್ನು ಮನರಂಜಿಸಬೇಕು ಎಂದು ಹೇಳಿದ್ದ. ಅಷ್ಟೇ ಅಲ್ಲದೇ ನಾನು ಬೇಗ ಮದುವೆಯಾಗಲೂ ನೀನು ನನಗೆ ಸಹಾಯ ಮಾಡು ಎಂದು ಕೇಳಿಕೊಂಡಿದ್ದ. ಜೊತೆಗೆ ಫೋನ್ ನಂಬರ್ ಕೂಡ ಕೇಳಿದ್ದು, ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ನಮ್ಮಿಬ್ಬರಿಗೂ ವಯಸ್ಸಿನ ಅಂತರ ತುಂಬಾ ಇದೆ. ಇದು ಸಾಧ್ಯವಿಲ್ಲ ಹೋಗು ಎಂದು ಕೋಪಗೊಂಡು ಹೇಳಿದೆ. ನಂತರ ಆತ ಮನೆಯಿಂದ ಹೋಗಿದ್ದಾನೆ ಎಂದು ದೂರಿನಲ್ಲಿ ಘಟನೆಯ ಬಗ್ಗೆ ವಿವರಿಸಿದ್ದಾರೆ.

ಸದ್ಯಕ್ಕೆ ಈ ಕುರಿತು ವೇಜಲ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Comments are closed.