ರಾಷ್ಟ್ರೀಯ

ಕಾಂಗ್ರೆಸ್ ನದ್ದು ದೇಶಭಕ್ತಿ ಅಲ್ಲ, ವೋಟ್ ಭಕ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದ ಮೋದಿ

Pinterest LinkedIn Tumblr

ಪಾಟ್ನಾ: ದೇಶಭಕ್ತಿಗಾಗಿ ಬಿಜೆಪಿ ನಿಂತರೆ ಕಾಂಗ್ರೆಸ್ ನದ್ದು ವೋಟ್ ಭಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

2019 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಾಟ್ನಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ನದ್ದು ದೇಶಭಕ್ತಿ ಅಲ್ಲ, ವೋಟ್ ಭಕ್ತಿ, ಆದ್ದರಿಂದಲೇ ಯುಪಿಎ ಸರ್ಕಾರ ಪಾಕಿಸ್ತಾನದ ಭಯೋತ್ಪಾದಕರು ಮುಂಬೈ ನಲ್ಲಿ ದಾಳಿ ನಡೆಸಿದಾಗ ಪಾಕ್ ಮೇಲೆ ಪ್ರತಿ ದಾಳಿ ನಡೆಸುವುದಕ್ಕೆ ಒಪ್ಪಲಿಲ್ಲ ಎಂದು ಆರೋಪಿಸಿದ್ದಾರೆ.

2008 ರ ಬಾಟ್ಲಾ ಹೌಸ್ ಎನ್ ಕೌಂಟರ್ ನ ಹುತಾತ್ಮರನ್ನೂ ಸಹ ಕಾಂಗ್ರೆಸ್ ತನ್ನ ವೋಟ್ ಭಕ್ತಿಯ ಕಾರಣದಿಂದಾಗಿ ಅವಮಾನ ಮಾಡಿದೆ.
ಬಿಜೆಪಿ ದೇಶ ಭಕ್ತಿಯನ್ನು ನಂಬಿದ್ದು, ಉರಿ ಹಾಗೂ ಪುಲ್ವಾಮ ದಾಳಿ ನಂತರ ಸರ್ಜಿಕಲ್ ಸ್ಟ್ರೈಕ್ ಮಾಡುವುದಕ್ಕೆ ಸಾಧ್ಯವಾಯಿತು ಎಂದು ಮೋದಿ ಹೇಳಿದ್ದಾರೆ.

Comments are closed.