ರಾಷ್ಟ್ರೀಯ

ಮದ್ರಾಸ್ ಕೋರ್ಟ್ ತೀರ್ಪಿನ ನಂತರ ಗೂಗಲ್ ಇಂಡಿಯಾದಿಂದ ಟಿಕ್ ಟಾಕ್ ಆಪ್ ನಿಷೇಧ!

Pinterest LinkedIn Tumblr


ನವದೆಹಲಿ: ಮದ್ರಾಸ್ ಕೋರ್ಟ್ ತೀರ್ಪಿನ ನಂತರ ಈಗ ಗೂಗಲ್ ಇಂಡಿಯಾ ಚೀನಾ ಮೂಲದ ಟಿಕ್ ಟಾಕ್ ಆಪ್ ನ್ನು ಭಾರತದಲ್ಲಿ ನಿಷೇಧಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನಾ ಮೂಲದ ಬೈಟ್ ಡ್ಯಾನ್ಸ್ ಟೆಕ್ನಾಲಜಿ ಟಿಕ್ ಟಾಕ್ ಮೇಲಿನ ನಿಷೇಧವನ್ನು ತೆರವುಗೊಳಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಗೂಗಲ್ ಇಂಡಿಯಾ ಈಗ ಈ ಕ್ರಮವನ್ನು ತೆಗೆದುಕೊಂಡಿದೆ.ಆ ಮೂಲಕ ಈಗ ಟಿಕ್ ಟಾಕ್ ಗೆ ಈಗ ಮಾರುಕಟ್ಟೆಯಲ್ಲಿ ಭಾರಿ ಹಿನ್ನಡೆಯಾಗಲಿದೆ ಎನ್ನಲಾಗಿದೆ.

ಮದ್ರಾಸ್ ಹೈಕೋರ್ಟ್ ಏಪ್ರಿಲ್ 3 ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ನಂತರ ಟಿಕ್ಟೋಕ್ ಅನ್ನು ನಿಷೇಧಿಸಲು ಕೇಂದ್ರ ಸರ್ಕಾರವನ್ನು ಕೋರಿತ್ತು ,ಈ ಆಪ್ ಅಶ್ಲೀಲತೆಯನ್ನು ಪ್ರೋತ್ಸಾಹಿಸುತ್ತದೆ ಅಲ್ಲದೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತೀರ್ಪು ನೀಡಿತ್ತು.ಇದಾದ ನಂತರ ಕೇಂದ್ರ ಸರ್ಕಾರ ಆಪಲ್ ಮತ್ತು ಗೂಗಲ್ ಗೆ ಹೈಕೋರ್ಟ್ ನಿರ್ಧಾರವನ್ನು ಅನುಸರಿಸಬೇಕೆಂದು ಐಟಿ ಸಚಿವಾಲಯದ ಮೂಲಕ ಪತ್ರವನ್ನು ಬರೆದಿತ್ತು.ಈ ಹಿನ್ನಲೆಯಲ್ಲಿ ಈಗ ಗೂಗಲ್ ಕ್ರಮವನ್ನು ಕೈಗೊಂಡಿದೆ.ಆದರೆ ಆಪಲ್ ನಲ್ಲಿ ಟಿಕ್ ಟಾಕ್ ಆಪ್ ಇನ್ನು ಲಭ್ಯ ಇದೆ ಎನ್ನಲಾಗಿದೆ.

Comments are closed.