ರಾಷ್ಟ್ರೀಯ

ಇಮಾಂದಾರ್ ಚೌಕಿದಾರ್ ಮತ್ತು ಭ್ರಷ್ಟಾಚಾರಿ ನಾಮ್ದಾರ್ ಮಧ್ಯೆ ಯಾರು ಬೇಕೆಂದು ಜನರೇ ತೀರ್ಮಾನಿಸಿ: ಮೋದಿ

Pinterest LinkedIn Tumblr

ಅಹ್ಮದ್ ನಗರ(ಮಹಾರಾಷ್ಟ್ರ): ಇಮಾಂದಾರ್ ಚೌಕಿದಾರ್ ಮತ್ತು ಭ್ರಷ್ಟಾಚಾರಿ ನಾಮ್ದಾರ್ ಮಧ್ಯೆ ಯಾರು ಬೇಕೆಂದು ಜನರೇ ತೀರ್ಮಾನಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ.

ಅವರು ಇಂದು ಅಹ್ಮದ್ ನಗರ್ ಮತ್ತು ಶಿರಡಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪರವಾಗಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ, ಕಳೆದ 5 ವರ್ಷಗಳಲ್ಲಿ ಭಾರತ ದೇಶ ವಿಶ್ವದಲ್ಲಿ ಸೂಪರ್ ಪವರ್ ದೇಶವಾಗಿ ಗುರುತಿಸಿಕೊಂಡಿದೆ. ಹಿಂದಿನ 10 ವರ್ಷಗಳ ರಿಮೋಟ್ ಕಂಟ್ರೋಲ್ ಸರ್ಕಾರ ನಿಮಗೆ ನೆನಪಿದೆಯೇ? ಹಗರಣಗಳಿಂದ ತುಂಬಿ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಕೂಡ ಹಿಂದಿನ ಸರ್ಕಾರ ವಿಳಂಬ ಮಾಡುತ್ತಿತ್ತು ಎಂದು ಯುಪಿಎ ಸರ್ಕಾರವನ್ನು ಆರೋಪಿಸಿದರು.

ಇಂದು ಇಮಾಂದಾರ್ ಚೌಕಿದಾರ್ ಮತ್ತು ಭ್ರಷ್ಟಾಚಾರಿ ನಾಮ್ ದಾರ್ ಮಧ್ಯೆ ಯಾರು ನಿಮಗೆ ಸರ್ಕಾರ ನಡೆಸಲು ಬೇಕೆಂದು ನಿರ್ಧರಿಸುವ ಸಮಯ ಬಂದಿದೆ ಎಂದರು.

ಎಂದಿನಂತೆ ಮೊದಲ ಬಾರಿ ಮತ ಚಲಾಯಿಸುವ ಯುವಜನತೆಯನ್ನು ಕೂಡ ಉದ್ದೇಶಿಸಿ ಮಾತನಾಡಿದ ಮೋದಿ, ದೇಶದ ಭದ್ರತೆ ವಿಚಾರದಲ್ಲಿ ಹಿಂದಿನ ಸರ್ಕಾರ ರಾಜಿ ಮಾಡಿಕೊಂಡಿತ್ತು. ಅದನ್ನು ನೀವು ಒಪ್ಪುತ್ತೀರಾ? ಎಂದು ಕೇಳಿದರು.

ಜಮ್ಮು-ಕಾಶ್ಮೀರಕ್ಕೆ ಪ್ರಧಾನಿ ಬೇಕೆಂದು ನ್ಯಾಷನಲ್ ಕಾನ್ಫರೆನ್ಸ್ ಒತ್ತಾಯಕ್ಕೆ ಕೂಡ ತಿರುಗೇಟು ನೀಡಿದರು. ಜನರ ಬಗ್ಗೆ ಯೋಚನೆ ಮಾಡುವುದನ್ನು ನಿಲ್ಲಿಸಿದ ಕಾಂಗ್ರೆಸ್ ಬಗ್ಗೆ ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದರು. ಶರದ್ ಪವಾರ್ ಅವರಿಗೂ ತಿರುಗೇಟು ನೀಡಿದ ಪ್ರಧಾನಿ, ದೇಶದ ಹೆಸರಿನಲ್ಲಿ ಕಾಂಗ್ರೆಸ್ ತೊರೆದರು. ಆದರೆ ಇಂದು ಅವರು ಏಕೆ ಮೌನವಾಗಿದ್ದಾರೆ. ನಿಮ್ಮ ಪಕ್ಷ ರಾಷ್ಟ್ರವಾದಿ, ಆದರೆ ನೀವು ವಿದೇಶಿ ಮೂಲದ ಪ್ರಜೆಯ ಪರದೆ ಮೂಲಕವೇ ದೇಶವನ್ನು ನೋಡುತ್ತೀರಿ, ರಾಷ್ಟ್ರವಾದಿ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತೀರಾ ಎಂದು ಆರೋಪಿಸಿದರು.

Comments are closed.