ರಾಷ್ಟ್ರೀಯ

ಪ್ರಧಾನಿ ಹುದ್ದೆಗೆ ಮೋದಿ, ರಾಹುಲ್ ನಡುವೆ ಮೋದಿಗೆ ಬಹು ಅಂತರದ ಜಯ: ಐಎಎನ್ಎಸ್-ಸಿವೋಟರ್

Pinterest LinkedIn Tumblr


ನವದೆಹಲಿ: ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯವರ ನಡುವಿನ ನೇರ ಸ್ಪರ್ಧೆಯಲ್ಲಿ ಮೋದಿ ಅವರು ಬಹುದೊಡ್ಡ ಅಂತರದಿಂದ ಜಯಗಳಿಸಲಿದ್ದಾರೆ ಎಂದು ಐಎಎನ್ಎಸ್-ಸಿವೊಟೇರ್ ಸಮೀಕ್ಷೆ ತಿಳಿಸಿದೆ.

ಸೋಮವಾರ ಬಿಡುಗಡೆಯಾದ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ ಅಧ್ಯಕ್ಷ ರಾಹುಲ ಗಾಂಧಿ ಷೇರುಗಳು ಕುಸಿದಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶೇರುಗಳಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ. ಜನವರಿ 1 ರಿಂದ 1,05,000 ಇದ್ದ ಸಂಚಿತ ಮಾದರಿ ಪ್ರಮಾಣ ಮತ್ತು 33,000 ಸಾಪ್ತಾಹಿಕ ಸೇರ್ಪಡೆಯನ್ನು ಹೊಂದಿದೆ ಎಂದು ಸಮೀಕ್ಷೆ ತಿಳಿಸಿದೆ.

ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ನಡುವಿನ ಬೈನರಿ ಆಯ್ಕೆಗೆ ನಾವು ಪ್ರತಿಕ್ರಿಯಿಸಿದಾಗ, ಫಲಿತಾಂಶಗಳು ಒಂದೇ ರೀತಿಯಾಗಿ ಕಂಡುಬಂದಿವೆ. ಆದರೆ 2019 ರ ಜನವರಿ 1 ರಂದು ರಾಹುಲ್ ಗಾಂಧಿಯನ್ನು ಪ್ರಧಾನಿ ಹುದ್ದೆಗೆ ಆಯ್ಕೆಗೆ ಸಂಬಂಧಿಸಿದಂತೆ ಶೇ.38 ಇದ್ದ ಪ್ರತಿಕ್ರಿಯೆ ಶೇ. 34.5 ಕ್ಕೆ ಕುಸಿದಿದೆ. ಮತ್ತೊಂದೆಡೆ ಪ್ರಧಾನಿ ಮೋದಿ ಅನುಮೋದನೆ ಶೇ.51 ರಿಂದ ಶೇ.58 ಕ್ಕೆ ಏರಿದೆ. ನಿವ್ವಳ ಅನುಮೋದನೆ ರೇಟಿಂಗ್ಗಳಲ್ಲಿನ ಈ ವ್ಯತ್ಯಾಸ ಮತ್ತಷ್ಟು ಇನ್ನೂ ಹೆಚ್ಚಾಗಿದೆ. ಈ ಹಿಂದೆ ತುಲನಾತ್ಮಕವಾಗಿ 12 ರಷ್ಟು ಇದ್ದ ಅಂತರ ಈಗ ಮೋದಿ ಪರವಾಗಿ ಶೇ.23ಕ್ಕೆ ಏರಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಫೆಬ್ರವರಿ 26 ರ ಬಾಲಾಕೋಟ್ ವಾಯುದಾಳಿ ಬಳಿಕ ಮೋದಿ ಜನಪ್ರಿಯತೆ ರೇಟಿಂಗ್ ಶೇ.56.64 ಇದ್ದು, ರಾಹುಲ್ ಗಾಂಧಿ ಪರವಾಗಿ ಶೇ. 32.27 ಕ್ಕೆ ಸೀಮಿತವಾಗಿದೆ. ಮರುದಿನ, ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಪರ ಮೆಚ್ಚುಗೆ ವ್ಯಕ್ತಪಡಿಸಿದವರ ಪ್ರಮಾಣ ಶೇ.57.84ಕ್ಕೆ ಏರಿಕೆಯಾಗಿದ್ದರೆ, ರಾಹುಲ್ ಗಾಂಧಿ ಪರ ಪ್ರತಿಕ್ರಿಯೆ ಪ್ರಮಾಣ 31.08ಕ್ಕೆ ಕುಸಿದಿದೆ ಎಂದು ಸಮೀಕ್ಷೆ ಹೇಳಿದೆ.

ಮಾರ್ಚ್ 1 ರಂದು ಐಎಎಫ್ ಫೈಟರ್ ಪೈಲಟ್ ಅಭಿನಂದನ್ ಅವರನ್ನು ಪಾಕಿಸ್ತಾನ ಬಿಡುಗಡೆಗೊಳಿಸಿದ ದಿನದಂದು ಪ್ರಧಾನಿ ಮೋದಿ ಪರವಾದ ರೇಟಿಂಗ್ ಶೇ.60ಕ್ಕೂ ಹೆಚ್ಚಿದ್ದು, ಜನವರಿ 1ರ ಬಳಿಕ ಗಳಿಸಿದ ಅತ್ಯುತ್ತಮ ರೇಟಿಂಗ್ ಎನ್ನಲಾಗಿದೆ. ಐಎಎನ್ಎಸ್-ಸಿವೊಟೇರ್ ಸಮೀಕ್ಷೆಯ ಪ್ರಕಾರ ಅದೇ ದಿನ ರಾಹುಲ್ ಗಾಂಧಿ ಪರವಾದ ರೇಟಿಂಗ್ ಶೇ.29.52ಕ್ಕೆ ಕುಸಿದಿದೆ. ಮಾರ್ಚ್ 2 ರಂದು, ಪ್ರಧಾನಿ ಮೋದಿ ಪರವಾದ ಈ ಅಂಕಿ-ಅಂಶಗಳು ಶೇ.61.7 ಕ್ಕೆ, ಮಾರ್ಚ್ 6 ರಂದು ಶೇ.64.65 ರ ವರೆಗೆ ಅತ್ಯಧಿಕ ಮೆಚ್ಚುಗೆ ಪಡೆದಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪರವಾದ ರೇಟಿಂಗ್ ಶೇ.26.05ಕ್ಕೆ ಕುಸಿದಿದೆ.

ಸಮೀಕ್ಷೆಯ ಪ್ರಕಾರ: “ಪ್ರಧಾನಮಂತ್ರಿ ಹುದ್ದೆಗೆ ನರೇಂದ್ರ ಮೋದಿ ಅವರು ಅಧಿಕ ಅಂತರದಿಂದ ಗೆಲ್ಲುವ ಕುದುರೆಯಾಗಿ ಮುನ್ನಡೆಯಲಿದ್ದಾರೆ ಎನ್ನಲಾಗಿದೆ. ಏಪ್ರಿಲ್ 2 ರಂದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಬಳಿಕ ಶೇ.33.58 ಇದ್ದ ರೇಟಿಂಗ್, ಏಪ್ರಿಲ್ 3 ರಂದು ಶೇ.34.32 ಮತ್ತು ಏಪ್ರಿಲ್ 4ರಂದು ಶೇ. 34.51ಕ್ಕೆ ಏರಿಕೆಯಾಗಿದೆ. ಆದರೆ ಮೋದಿ ರೇಟಿಂಗ್ ಗಣನೀಯ ಏರಿಕೆ ಕಂಡಿದ್ದು, ಶೇ. 58.01ಕ್ಕೆ ಏರಿದೆ ಎಂದು ಸಮೀಕ್ಷೆ ತಿಳಿಸಿದೆ.

Comments are closed.