ರಾಷ್ಟ್ರೀಯ

ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ್ದ ಭರವಸೆಗಳಲ್ಲಿ ಶೇ.98ರಷ್ಟು ಈಡೇರಿಕೆ !

Pinterest LinkedIn Tumblr

ನವದೆಹಲಿ: ಭಾರತೀಯ ಜನತಾ ಪಾರ್ಟಿ 2014ರ ಲೋಕಸಭೆ ಚುನಾವಣೆಗೆ ಮುನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಭರವಸೆಗಳಲ್ಲಿ ಶೇಕಡಾ 98ರಷ್ಟನ್ನು ಈಡೇರಿಸಿದೆ ಎಂದು ಬಿಜೆಪಿಯ ಉಪಾಧ್ಯಕ್ಷ ವಿನಯ್ ಸಹಸ್ರಬುದ್ಧೆ ನೇತೃತ್ವದ ಥಿಂಕ್ ಟ್ಯಾಂಕ್ ಸಾರ್ವಜನಿಕ ಯೋಜನಾ ಸಂಶೋಧನಾ ಕೇಂದ್ರ ತಯಾರಿಸಿದ ಕರಡು ವರದಿಯಲ್ಲಿ ತಿಳಿಸಿದೆ. ಬಿಜೆಪಿ 2014ರಲ್ಲಿ ಒಟ್ಟು 549 ಭರವಸೆಗಳನ್ನು ನೀಡಿತ್ತು.

ಪ್ರಮುಖವಾದವುಗಳನ್ನು ಈಡೇರಿಸಿರುವ 2014ರ ಚುನಾವಣಾ ಭರವಸೆಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಉದ್ಯೋಗ ಸೃಷ್ಟಿ ಮತ್ತು ಉದ್ಯಮಶೀಲತೆ, ಭ್ರಷ್ಟಾಚಾರ ನಿಯಂತ್ರಣ, ಯೋಜನೆಗಳ ನಿಶ್ಚಲತೆ, ಕಳಪೆ ವಿತರಣೆ ಮತ್ತು ಕೇಂದ್ರ ಸರ್ಕಾರದ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸುವ ವಿಷಯಗಳನ್ನು ಒಳಗೊಂಡಿತ್ತು. ಸರ್ಕಾರ ಈ ಭರವಸೆಗಳಲ್ಲಿ ಎಷ್ಟನ್ನು ಹೇಗೆ ಈಡೇರಿಸಿದೆ ಎಂದು ವಿವರವಾಗಿ ಕರಡು ವರದಿಯಲ್ಲಿ ತಿಳಿಸಲಾಗಿದೆ.

ಇಪಿಎಫ್ಒ, ಇಎಸ್ಐಸಿ ಮತ್ತು ಎನ್ ಪಿಸಿಯಿಂದ ಅಂಕಿಅಂಶಗಳನ್ನು ಪಡೆದು ಈ ಕರಡು ವರದಿಯನ್ನು ಸಿದ್ದಪಡಿಸಲಾಗಿದ್ದು ದೇಶದಲ್ಲಿ 4.67 ಕೋಟಿ ಜನರು ಉದ್ಯೋಗದಲ್ಲಿ ಔಪಚಾರಿಕ ವಲಯಗಳನ್ನು ಸೇರಿದ್ದಾರೆ. 2014ರಲ್ಲಿ ದೇಶದಲ್ಲಿದ್ದ 8.48 ಶೇಕಡಾದಷ್ಟು ಹಣದುಬ್ಬರವನ್ನು ಶೇಕಡಾ 2.5ಕ್ಕೆ ತಗ್ಗಿದೆ. ಬೆಲೆ ಏರಿಕೆ ಸಮಸ್ಯೆ ಬಗ್ಗೆ ಗಮನಹರಿಸಲಾಗಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 17 ಕೋಟಿ ಮಂದಿಗೆ ಲಾಭವಾಗಿದೆ ಎಂದು ವರದಿ ತಿಳಿಸುತ್ತದೆ.

ಈ ಕರಡು ವರದಿಯನ್ನು ಸದ್ಯದಲ್ಲಿಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಸಲ್ಲಿಸಲಾಗುತ್ತದೆ. ಆಧಾರ್ ಸಂಖ್ಯೆ ಮೂಲಕ ಫಲಾನುಭವಿಗಳಿಗೆ ನೇರ ವರ್ಗಾವಣೆಯಿಂದ ಸರ್ಕಾರದ ಇ ಮಾರುಕಟ್ಟೆಯಡಿಯಲ್ಲಿ 22 ಸಾವಿರದ 420 ಕೋಟಿ ಜನರಿಗೆ ಅನುಕೂಲವಾಗಿದೆ, ದೇಶಾದ್ಯಂತ 9.79 ಕೋಟಿ ಶೌಚಾಲಯ ನಿರ್ಮಾಣ, 2.55 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಮತ್ತು 7.65 ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಲಾಗುತ್ತದೆ.

ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ಪ್ರತಿದಿನ 134 ಕಿಲೋ ಮೀಟರ್ ಉದ್ದದವರೆಗಿನ ಅಂತರದಲ್ಲಿ ಗ್ರಾಮೀಣ ರಸ್ತೆ ನಿರ್ಮಾಣ ಮತ್ತು ಪ್ರತಿದಿನಕ್ಕೆ 30 ಕಿಲೋ ಮೀಟರ್ ಪ್ರಗತಿಯಲ್ಲಿ ಹೆದ್ದಾರಿ ನಿರ್ಮಿಸಲಾಗುತ್ತದೆ.

ಲೋಕ್ ಪಾಲ್ ಸಂಸ್ಥೆ ರಚನೆ, ರಾಷ್ಟ್ರೀಯ ಆರೋಗ್ಯ ಸಂಸ್ಥೆ, ಯುಐಡಿಎಐ, ಜಿಎಸ್ ಟಿ ಕೌನ್ಸಿಲ್, ಸಿಎಂ ಉಪ ಗುಂಪುಗಳು, ವ್ಯಾಪಾರ ಅನುಕೂಲತೆಗೆ ಎಂಇಎ ರಾಜ್ಯ ವಿಂಗಡನೆ ಮಾಡಲಾಗಿದೆ.

ಎನ್ಇ ಬೆಳವಣಿಗೆಗೆ ಗಮನ, ಒಡಿಶಾ ಪೆಟ್ರೊ ವಲಯ, ಬಿಹಾರ್ ಅಭಿವೃದ್ಧಿ ಪ್ಯಾಕೇಜ್, ಬಿಹಾರ-ಬಂಗಾಳ ಒಳಾಂಗಣ ವಾಟರ್ ವೇ, ಅಸ್ಸಾಂನಲ್ಲಿ ನೆರೆ ಪ್ರವಾಹ ನಿಯಂತ್ರಣ ಯತ್ನ ಮಾಡಲಾಗಿದೆ.

35 ಕೋಟಿ ಜನರು ಜನ ಧನ್ ಬ್ಯಾಂಕಿಂಗ್, 3.18 ಲಕ್ಷ ಸರ್ಕಾರಿ ಸೇವಾ ಕೇಂದ್ರಗಳು, ಇ-ಆಸ್ಪತ್ರೆ ಶಿಲ್ಪ, ಉಮಂಗ್ ಆಪ್ ಗಳ ರಚನೆಯನ್ನು ಬಿಜೆಪಿ ಕಳೆದ 5 ವರ್ಷಗಳಲ್ಲಿ ಮಾಡಿದೆ.

ಇನ್ನು ಕಳೆದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಒಡಿಶಾದಲ್ಲಿ ಬಿಜೆಡಿ, ದೆಹಲಿಯಲ್ಲಿ ಆಪ್ ಮತ್ತು ಪಂಜಾಬ್ ನಲ್ಲಿ ಕಾಂಗ್ರೆಸ್ ಮಾಡಿರುವ ಚುನಾವಣಾ ಪ್ರಣಾಳಿಕೆ ಭರವಸೆಗಳ ಬಗ್ಗೆ ಕೂಡ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ.

Comments are closed.