ಭೋಪಾಲ್: ಕಾಡಿನಲ್ಲಿ ಹುಲಿ ದಾಳಿಯಿಂದ ತನ್ನ ಮಾಲೀಕ ಮತ್ತು ಆತನ ಪತ್ನಿಯನ್ನು ಸಾಕುನಾಯಿಯೊಂದು ರಕ್ಷಿಸಿದ ಅಪರೂಪದ ಘಟನೆ ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯಲ್ಲಿ ನಡೆದಿದೆ.
ಕುಂಜಿರಾಮ್ ಯಾದವ್ ಮತ್ತು ಆತನ ಪತ್ನಿ ಪೂಲ್ವತಿ ಯಾದವ್ ಕಾಡಿನಲ್ಲಿ ಸಾಕುನಾಯಿಯೊಂದಿಗೆ ಹೊರಟಿದ್ದಾಗ ಎರಡು ಹುಲಿಗಳು ಏಕಾಏಕಿ ದಾಳಿ ಮಾಡಿವೆ. ಯಾದವ್ ದಂಪತಿ ಕನ್ಹಾ ಅಭಯಾರಣ್ಯ ಪ್ರದೇಶದಲ್ಲಿ ತಮ್ಮ ಎತ್ತನ್ನು ಹುಡುಕಿಕೊಂಡು ಸಾಗುತ್ತಿದ್ದಾಗ ಘಟನೆ ಸಂಭವಿಸಿದೆ.
ಈ ವೇಳೆ ಯಾದವ್ ದಂಪತಿ ಮೇಲೆರಗಿದ ಹುಲಿಗಳನ್ನು ಎದುರಿಸಲು ಯಾದವ್ ಅವರ ಸಾಕುನಾಯಿ ಮುಂದಾಗಿದೆ. ನಿರಂತರವಾಗಿ ಬೊಗಳುವ ಮೂಲಕ ಎರಡೂ ಹುಲಿಗಳನ್ನು ದಿಟ್ಟವಾಗಿ ಎದುರಿಸಿದ ಸಾಕುನಾಯಿ, ಯಾದವ್ ದಂಪತಿಯನ್ನು ರಕ್ಷಿಸುವಲ್ಲಿ ಸಫಲವಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕನ್ಹಾ ರಣ್ಯ ಇಲಾಖೆ ಸಿಬ್ಬಂದಿ, ಸಾಕುನಾಯಿ ತನ್ನ ಮಾಲೀಕರ ರಕ್ಷಣೆಗೆ ಮುಂದಾದ ಕ್ರಮ ನಿಜಕ್ಕೂ ನಂಬಲು ಅಸಾಧ್ಯ ಎಂದು ಹೇಳಿದ್ದಾರೆ. ಅಲ್ಲದೇ ಹುಲಿ ದಾಳಿಯಿಂಧ ಗಾಯಗೊಂಡಿರುವ ಯಾದವ್ ದಂಪತಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾನವ ಪ್ರಾಣಿ ಸಂಘರ್ಷ ರಾಷ್ಟ್ರೀಯ ಉದ್ಯಾನಗಳ ಬಳಿ ಸದಾ ನಡೆಯುತ್ತಿರುತ್ತದೆ. ಸ್ಥಳೀಯ ಗ್ರಾಮಸ್ಥರು ಹಲವು ಬಾರಿ ಪ್ರಾಣಿಗಳಿಗೆ ಬಲಿಯಾಗುತ್ತಾರೆ.
Comments are closed.