ರಾಷ್ಟ್ರೀಯ

ಪ್ರಧಾನಿ ಮೋದಿ ಬಿರಿಯಾನಿ ತಿನ್ನಲು ಪಾಕಿಸ್ತಾನಕ್ಕೆ ಹೋಗಿರಲಿಲ್ಲವೇ ? ಪ್ರಿಯಾಂಕಾ ಗಾಂಧಿ

Pinterest LinkedIn Tumblr

ಅಯೋಧ್ಯೆ: 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ದಿಢೀರ್ ಪಾಕಿಸ್ತಾನ ಭೇಟಿಯ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಸ್ತಾಪಿಸಿ ಕಾಲೆಳಿದಿದ್ದಾರೆ.

ಪ್ರಧಾನಿ ಮೋದಿ ಬಿರಿಯಾನಿ ತಿನ್ನಲು ಪಾಕಿಸ್ತಾನಕ್ಕೆ ಹೋಗಿರಲಿಲ್ಲವೇ ? ಆಗಿನ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರೇ ಮೋದಿಗೆ ಬಿರಿಯಾನಿ ಬಡಿಸಿದ್ದರು ಎಂದು ಟಾಂಗ್ ನೀಡಿದ್ದಾರೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಪ್ರಿಯಾಂಕಾ ಗಾಂಧಿ, ತವರು ಕ್ಷೇತ್ರ ವಾರಾಣಸಿಯ ಬಗ್ಗೆ ಮೋದಿ ನಿರ್ಲಕ್ಷ್ಯವನ್ನೂ ಟೀಕಿಸಿದ್ದಾರೆ. ಜಗತ್ತಿನ ನಾನಾ ದೇಶಗಳನ್ನು ಸುತ್ತುವ ಪ್ರಧಾನಿಗೆ ಕಳೆದ ಐದು ವರ್ಷಗಳಿಂದ ತಮ್ಮ ಕ್ಷೇತ್ರದ ಒಂದೇ ಒಂದು ಗ್ರಾಮಕ್ಕೆ ಭೇಟಿ ನೀಡುವಷ್ಟು ಸಮಯವೂ ಇಲ್ಲ ಎಂದಿದ್ದಾರೆ.

ಒಂದಷ್ಟು ಕಾರ್ಯಕ್ರಮಗಳನ್ನು ಪಾಲ್ಗೊಂಡಿದ್ದು ಬಿಟ್ಟರೆ ವಾರಾಣಸಿಯನ್ನು ಸಂಪೂರ್ಣವಾಗಿ ಪ್ರಧಾನಿ ನೋದಿ ನಿರ್ಲಕ್ಷ್ಯಿಸಿದ್ದಾರೆ ಎಂದು ಆರೋಪಿಸಿದರು.

ಕಳೆದೆರಡು ದಿನಗಳಿಂದ ರಾಹುಲ್ ಪ್ರತಿನಿಧಿಸುವ ಅಮೇಠಿ ಹಾಗೂ ತಾಯಿ ಸೋನಿಯಾ ಅವರ ರಾಯ್ ಬರೇಲಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ ವಾರಾಣಸಿಯಿಂದ ತಾವೇಕೆ ಸ್ಪರ್ಧಿಸಬಾರದು ಎಂದು ಪ್ರಶ್ನಿಸಿದ್ದಾರೆ.

ಪಕ್ಷ ಬಯಸಿದರೆ ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸಲು ಸಿದ್ಧ. ಬೇಕಾದರೂ ವಾರಾಣಸಿಯೂ ಆಗಬಹುದು ಎಂದು ಹೇಳಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

Comments are closed.