ರಾಷ್ಟ್ರೀಯ

ವಿಶ್ವ ಸುತ್ತುವ ಮೋದಿಗೆ ವಾರಣಾಸಿಯ ಗ್ರಾಮಗಳಿಗೆ ಬರಲಿಕ್ಕೆ ಸಮಯವಿಲ್ಲ- ಪ್ರಿಯಾಂಕಾ ಗಾಂಧಿ

Pinterest LinkedIn Tumblr


ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ತಮ್ಮ ಕ್ಷೇತ್ರದ ವಾರಣಾಸಿಯಲ್ಲಿ ಒಂದೇ ಹಳ್ಳಿಗೆ ಭೇಟಿ ನೀಡಲು ಸಮಯ ಸಿಕ್ಕಿಲ್ಲ ಎನ್ನುವುದು ಆಶ್ಚರ್ಯವಾಗುತ್ತದೆ ಎಂದು ಪ್ರಿಯಂಕಾ ಗಾಂಧಿ ಹೇಳಿದರು.

ಉತ್ತರ ಪ್ರದೇಶದ ಫೈಜಾಬಾದ್ ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ” ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ವಾರಣಾಸಿಯ ಒಂದೇ ಒಂದು ಗ್ರಾಮಕ್ಕೂ ಭೇಟಿ ನೀಡದಿರುವುದನ್ನು ಜನರಿಂದ ಕೇಳಿ ನಿಜಕ್ಕೂ ಆಶ್ಚರ್ಯಗೊಂಡಿದ್ದೇನೆ ” ಎಂದರು.

ಇನ್ನು ಮುಂದುವರೆದು “ಅವರು ಅಮೇರಿಕಾ, ಜಪಾನ್, ಚೀನಾ ಅಲ್ಲದೆ ಇಡೀ ಜಗತ್ತನ್ನೇ ಸುತ್ತಲು ಹೋಗುತ್ತಾರೆ.ಸ್ವಂತ ತಮ್ಮದೇ ಕ್ಷೇತ್ರದ ಜನರಿಗೆ ಏನೂ ಮಾಡಿಲ್ಲ.ಇದು ನಿಜಕ್ಕೂ ಸಣ್ಣ ವಿಚಾರವಲ್ಲ, ಗಂಭೀರವಾದದ್ದು ಇದು ಅವರ ಸರ್ಕಾರದ ಉದ್ದೇಶವನ್ನು ತೋರಿಸುತ್ತದೆ.ಕೇವಲ ಶ್ರೀಮಂತರನ್ನು ಶ್ರೀಮಂತರನ್ನಾಗಿ ಮಾಡಲು ಹೊರಟಿದೆ ಹೊರತು ಬಡವರಿಗೆ ಸಹಾಯ ಮಾಡಲು ಅಲ್ಲ ” ಎಂದು ಪ್ರಿಯಾಂಕಾ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ ಅವರು ಬಿಜೆಪಿ ಸರ್ಕಾರವನ್ನು ಜನವಿರೋಧಿ ಹಾಗೂ ರೈತ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments are closed.