ರಾಷ್ಟ್ರೀಯ

ಬಿಹಾರದಲ್ಲಿ ಮೈತ್ರಿ ಸೀಟು ಹಂಚಿಕೆ ಅಂತಿಮ. ಆರ್ ಜೆಡಿ 20, ಕಾಂಗ್ರೆಸ್‌ಗೆ 9 ಸ್ಥಾನ

Pinterest LinkedIn Tumblr


ಪಾಟ್ನಾ: ಲೋಕಾಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಕಾಂಗ್ರೆಸ್ ಹಾಗೂ ಆರ್ ಜೆಡಿ ನಡುವೆ ಸೀಟು ಹಂಚಿಕೆ ಅಂತಿಮವಾಗಿದೆ. ಶುಕ್ರವಾರ ಮಹಾಘಟಬಂಧನ್ (ಮಹಾಮೈತ್ರಿ) ಅಂಗಪಕ್ಷಗಳಾದ ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ತಮ್ಮಲ್ಲಿನ ಸೀಟು ಹಂಚಿಕೆಯ ಅಧಿಕೃತ ಘೋಷಣೆ ಮಾಡಿದೆ. ಆ ಪ್ರಕಾರ ಆರ್ ಜೆಡಿ 20 ಹಾಗೂ ಕಾಂಗ್ರೆಸ್ 9 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ಪಾಟ್ನಾದಲ್ಲಿ ಮಾದ್ಯಮವನ್ನುದ್ದೇಶಿಸಿ ಮಾತನಾಡಿದ ಆರ್ ಜೆಡಿ ವಕ್ತಾರ ಮನೋಜ್ ಕುಮಾರ್ ಝಾ “ನಾವು ಕಾಂಗ್ರೆಸ್ ಗೆ ಒಂಬತ್ತು, ನಮ್ಮ ಪಕ್ಷಕ್ಕೆ 20 ಸ್ಥಾನಗಳನ್ನು ನೀಡಲು ನಿರ್ಧರಿಸಿದ್ದೇವೆ.”ಎಂದು ಹೇಳಿದರು.
ಉಪೇಂದ್ರ ಕುಶ್ವಹಾ ಅವರ ಆರ್.ಎಲ್.ಎಸ್.ಪಿ. (ರಾಷ್ಟ್ರೀಯ ಲೋಕ ಸಮತಾ ಪಕ್ಷ) ಮತ್ತು ಮುಖೇಶ್ ಸಾಹ್ನಿಯವರ ವಿಐಪಿ (ವಿಖ್ಶೀಲ್ ಇಸಾನ್ ಪಾರ್ಟಿ) ಕ್ರಮವಾಗಿ 5 ಮತ್ತು 3 ಸ್ಥಾನಗಳಲ್ಲಿ ಕಣಕ್ಕಿಳಿಯಲಿದೆ.
ಸಿಪಿಐ (ಎಮ್ಎಲ್) ಆರ್ ಜೆಡಿ ಕೋಟಾದಿಂದ ಒಂದು ಸ್ಥಾನದಲ್ಲಿ ಸ್ಪರ್ದ್ಘಿಸಲಿದೆ. ಜಿತನ್ ರಾಮ್ ಮಾಂಜಿ ಗಯಾದಿಂದ ಸ್ಪರ್ಧಿಸಲಿದ್ದಾರೆ ಎಂದು ಬಿಹಾರ ಆರ್ ಜೆಡಿ ಮುಖ್ಯಸ್ಥ ರಾಮಚಂದ್ರ ಪುರ್ವೆ ತಿಳಿಸಿದ್ದಾರೆ.
ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಮಾತನಾಡಿ ಮಹಾಘಟಬಂಧನ್ ಏನಿಲ್ಲ, ಮೈತ್ರಿಯಲ್ಲಿ ಎಲ್ಲಾ ಸರಿಯಿಲ್ಲ ಎಂಬ ಮಾತುಗಳು ಸುಳ್ಳು. ಇದು ಪಕ್ಷಗಳ ಒಕ್ಕೂಟವಷ್ಟೇ ಅಲ್ಲ ಇದು ಸಮಾನ ಹೃದಯಗಳ ಬಂಧನ.ಮೈತ್ರಿ ಪಾಲುದಾರರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದಿದ್ದಾರೆ.

Comments are closed.